ಶಂಕರಾಚಾರ್ಯರು ಸಮಾನತೆ ಸಾರಿದ ಧಾರ್ಮಿಕರು

92

Get real time updates directly on you device, subscribe now.


ಶಿರಾ: ಸಾಕಾರ ತತ್ವದಿಂದ ನಿರಾಕಾರ ತತ್ವ ಸಾಧನೆಯಾಗುವಂತೆ, ವಿಶ್ವ ವ್ಯಾಪಿಯಾದ ಪರಮಾತ್ಮನ ಅಂಶ ತನ್ನಲ್ಲಿಯೂ ಇದೆ ಎನ್ನುವ ಭಾವನೆಯಿಂದ, ತಾನು ಪರಮಾತ್ಮನ ಹಂಸವೇ ಎನ್ನುವ ಜ್ಞಾನ ಸಂಪಾದಿಸಿದಾಗ ಮಾತ್ರ ಶಂಕರರ ಅಹಂ ಬ್ರಹ್ಮಾಸ್ಮಿ ತತ್ವ ಅನುಭವಕ್ಕೆ ಬರುತ್ತದೆ ಎಂದು ವೇ.ಬ್ರಂ.ಗಿರೀಶ್ ಶರ್ಮ ನುಡಿದರು.

ಇಲ್ಲಿನ ಅಗ್ರಹಾರ ಬೀದಿಯಲ್ಲಿನ ಶ್ರೀಶಿವಶಂಕರ ದೇವಾಲಯದ ಆವರಣದಲ್ಲಿ ಮಂಗಳವಾರ ನಡೆದ ಶ್ರೀಶಂಕರಾಚಾರ್ಯರ ಜಯಂತೋತ್ಸವದ ವೇಳೆ ಅವರು ವಿಶೇಷ ಪ್ರವಚನ ನೀಡಿದರು. ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯ ಬರೆದಿದ್ದೇ ಅಲ್ಲದೇ ಸಾಮಾನ್ಯ ಜನರು ಮೋಕ್ಷವನ್ನು ಸಂಪಾದಿಸಬೇಕೆನ್ನುವ ದೃಷ್ಟಿಯಿಂದ ಭಕ್ತಿ ಮತ್ತು ತತ್ವ ಸಾಹಿತ್ಯದ ಮೂಲಕ ಜನಜಾಗ್ರತೆ ಮೂಡಿಸಿದರು. ಎಲ್ಲರೊಳಗಿರುವ ಜೀವಾತ್ಮ ಒಂದೇ ಎಂದು ಪ್ರತಿಪಾದಿಸುತ್ತಾ ಸಮಾನತೆ ಸಾರಿದ ಧಾರ್ಮಿಕರು ಶ್ರೀಶಂಕರರು ಎಂದು ಬಣ್ಣಿಸಿದರು.

ಸಾಮೂಹಿಕ ಉಪನಯನ: ಶಿರಾದ ಶ್ರೀಶಂಕರ ಸೇವಾ ಟ್ರಸ್ಟ್ ಮತ್ತು ಶ್ರೀಶಾರದಾ ಮಹಿಳಾ ಮಂಡಳಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶಂಕರ ಜಯಂತಿಯ ಅಂಗವಾಗಿ ಅಕ್ಷಯ ತೃತೀಯಾ ಭಾನುವಾರದಂದು ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ 5 ಜನ ವಟುಗಳಿಗೆ ಬ್ರಹ್ಮಪದೇಶ ನೀಡಲಾಯಿತು. ಸೋಮವಾರ ಬೆಳಗ್ಗೆ ರುದ್ರಹೋಮ ನಡೆಸಿದರೆ ಸಂಜೆಗೆ ಲಲಿತಾ ಸಹಸ್ರನಾಮ ಸಹಿತ ಕುಂಕುಮಾರ್ಚನೆ ನಡೆಸಲಾಯಿತು.

ಭವ್ಯ ಮೆರವಣಿಗೆ:
ಮಂಗಳವಾರ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಶಂಕರರ ಜಯಂತಿ ಉತ್ಸವದ ಭವ್ಯ ಮೆರವಣಿಗೆಯಲ್ಲಿ ವಿಪ್ರ ಸಂಘದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು, ವಿಪ್ರ ಸಂಘದ ತಾಲೂಕು ಅಧ್ಯಕ್ಷ ಬಿ.ಎನ್.ಅಚ್ಯುತರಾವ್, ವೆಂಕಟರಾಮ ರಾವ್, ದತ್ತಾತ್ರೇಯ, ವೆಂಕಟರಂಗಪ್ಪ, ಶ್ರೀಧರ್, ಬಾಲಾಜಿ, ಸುರೇಶ್ ಶಾಸ್ತ್ರಿ, ಸುಧೀಂದ್ರ, ಜಯಕೃಷ್ಣ, ಗುರುಪ್ರಸಾದ್, ರಾಜೇಶ್ವರಿ, ಲಕ್ಷ್ಮಿ, ಪ್ರೇಮ, ಲಲಿತಮ್ಮ, ಸವಿತಾ, ಪದ್ಮಾವತಿ, ಭ್ರಮರಾಂಬಾ, ಗಿರಿಜಮ್ಮ, ಸರಸ್ವತಿ ಮೊದಲಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!