ಶಂಕರಾಚಾರ್ಯರ ತತ್ವಾದರ್ಶ ಪಾಲಿಸಿ

82

Get real time updates directly on you device, subscribe now.


ತುಮಕೂರು: ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ತತ್ವಜ್ಞಾನಿ ಆದಿ ಶಂಕರಾಚಾರ್ಯರ ದಿನಾಚರಣೆಯನ್ನು ತತ್ವಜ್ಞಾನಿಗಳ ದಿನವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ ಜಂಟಿಯಾಗಿ ಆಯೋಜಿಸಿದ್ದ ಶ್ರೀಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸುವ ಮುಖೇನ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ವಿದ್ಯೆ ಮತ್ತು ಜ್ಞಾನ ಈ ಪ್ರಪಂಚದಲ್ಲಿ ಬದುಕಲು ಅಗತ್ಯವಿರುವ ಎರಡು ಸಂಪತ್ತು, ಇವುಗಳೇ ಮನುಷ್ಯನನ್ನು ಮೋಕ್ಷಕ್ಕೆ ತೆಗೆದುಕೊಂಡು ಹೋಗುವ ಸಾಧನಗಳಾಗಿವೆ ಎಂಬುದನ್ನು ತಮ್ಮ ಅದೈತ ಸಿದ್ಧಾಂತದ ಮೂಲಕ ಶ್ರೀಆದಿ ಶಂಕರಾಚಾರ್ಯರು ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನು ಒಳಗೊಂಡ ಸೌಹಾರ್ಧ, ಸಾಮಾರಸ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡುವಂತೆ ಶಂಕರಾಚಾರ್ಯರು ಕರೆ ನೀಡಿದ್ದರು ಎಂದರು.

ಎಂ.ವಿ.ನಾಗರಾಜರಾವ್ ಮಾತನಾಡಿ, ಜಗತ್ತಿಗೆ ಶಿವನೇ ತಂದೆಯಾದರೆ, ಪಾವರ್ತಿಯೇ ತಾಯಿ ಎಂದು ಪ್ರತಿಪಾದಿಸಿದ ಆದಿ ಶಂಕರಾಚಾರ್ಯರು, ತಮ್ಮ ಸಿದ್ಧಾಂತಗಳ ಬದುಕಿನ ದರ್ಶನ ಮಾಡಿಸಿದರು ಎಂದರು.
ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಶಂಕರ ಮಠದ ಮುಖ್ಯಸ್ಥ ನಂಜುಂಡೇಶ್ವರ, ಗಾಯಿತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್, ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಸುರೇಶ್ ಹೊಳ್ಳ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅನಂತರಾಮು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!