ರೋಡ್ ರೋಲರ್ ಏರಿದ ಸೊಗಡು ಶಿವಣ್ಣ

98

Get real time updates directly on you device, subscribe now.


ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೊಗಡು ಶಿವಣ್ಣ ಸ್ಪರ್ಧಿಸಿದ್ದು ವರಿಗೆ ರೋಡ್ ರೋಲರ್ ಚಿಹ್ನೆ ದೊರೆತಿದೆ.
ತುಮಕೂರಿನ ಸ್ವಾಭಿಮಾನಿ ಜನರ ಪರವಾಗಿ ಮತದಾರರ ಬಳಿಗೆ ಎರಡು ಜೋಳಿಗೆ ಹಿಡಿದು ಹೊರಟಿದ್ದೇನೆ. ಒಂದು ಜೋಳಿಗೆಗೆ ಮತ ಇನ್ನೊಂದು ಜೋಳಿಗೆಗೆ ಚುನಾವಣಾ ನಿರ್ವಹಣೆಗೆ ಹಣ ನೀಡುವಂತೆ ಮತದಾರರ ಬಳಿಗೆ ಜೋಳಿಗೆ ಹಿಡಿದು ಹೊರಟು, ಶಾಂತಿ, ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ, ಸಾರ್ವಜನಿಕರ ಧ್ವನಿಯಾಗಿ ಅಂಜದೆ, ಅಳುಕದೆ ಕಾರ್ಯನಿರ್ವಹಿಸಲು ಮುಂದಾಗಿದ್ದೇನೆ ಎಂದು ಸೊಗಡು ಶಿವಣ್ಣ ಮತದಾರರಲ್ಲಿ ವಿನಂತಿಸಿದ್ದಾರೆ.

ಕಳೆದ ನನ್ನ 50 ವರ್ಷಗಳ ಸುಧೀರ್ಘ ರಾಜಕೀಯ- ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಜನಪರ- ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಈ ಹಿಂದೆ ತುಮಕೂರು ನಗರದಲ್ಲಿ ಪದೇ ಪದೆ ಮರು ಕಳಿಸುತ್ತಿದ್ದ ಕೋಮುಗಲಭೆಗಳಿಂದ ತುಮಕೂರಿನ ಅಭಿವೃದ್ಧಿ ಹಿನ್ನಡೆ, ಅಸುರಕ್ಷಿತವಾದ ವಾತಾವರಣವು ನಿರ್ಮಾಣವಾಗಿತ್ತು. 1994ರ ಚುನಾವಣೆಯಲ್ಲಿ ನಾನು ಆಯ್ಕೆಗೊಂಡ ನಂತರ ತುಮಕೂರು ನಗರದಲ್ಲಿ ಶಾಂತಿ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿ, ಸರ್ವ ಜನಾಂಗದವರೂ ಸೌಹಾರ್ದಯುತವಾಗಿ ವ್ಯಾಪಾರ ವಹಿವಾಟು ನಡೆಯುವ ಕಾರ್ಯಗಳಾದವು. ನಗರದಲ್ಲಿ ಶಿಕ್ಷಣ, ಕೈಗಾರಿಕೆ, ಆರೋಗ್ಯ, ಮಹಿಳೆಯರ ಶ್ರೇಯೋಭಿವೃದ್ಧಿ, ಯುವಕ, ಯುವತಿಯರಿಗೆ ಆತ್ಮಸ್ಥೈರ್ಯ, ವಯೋವೃದ್ಧರು ಹಾಗೂ ಮಕ್ಕಳ ರಕ್ಷಣೆಗೆ ಆದ್ಯತೆ, ಹೇಮಾವತಿ ನೀರು ಅಮಾನಿಕೆರೆ ಅಭಿವೃದ್ಧಿ, ಯುಜಿಡಿ, ಶಾಲೆ, ಅಂಗನವಾಡಿ ಕೇಂದ್ರಗಳು ಮತ್ತು ಬಡವರಿಗೆ ಗುಂಪು ಮನೆಗಳ ನಿರ್ಮಾಣ, ಶಾಂತಿ ಸೌರ್ಹಾದತೆ, ನೂತನ ಸರ್ಕಾರಿ ಕಚೇರಿಗಳ ನಿರ್ಮಾಣ ಆದ್ಯತೆ ಮುಂತಾದವುಗಳ ಮೂಲಭೂತ ಅಭಿವೃದ್ಧಿಗೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯ ಚಟುವಟಿಕೆಗಳೂ ಆರಂಭಗೊಂಡವು ಎಂದಿದ್ದಾರೆ. ನಾಲ್ಕು ಬಾರಿ ಶಾಸಕ ಮತ್ತು 2 ಬಾರಿ ಮಂತ್ರಿಯಾಗಿ, ತುಮಕೂರು ನಗರದ ಸಮಗ್ರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳಾದವು ಎಂದು ವಿವರಿಸಿ, ಅಭಿವೃದ್ಧಿಗೆ ಪೂರಕ ಅನುಕೂಲಕರ ವಾತಾವರಣ ನಿರ್ಮಾಣವಾದವು. ತುಮಕೂರು ನಗರದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂ. ಹಣ ವಿನಿಯೋಗಿಸುತ್ತಿದೆ ಎಂದು ವಿವರಿಸಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನನ್ನ ಚುನಾವಣಾ ಗುರುತು ಕ್ರಮ ಸಂಖ್ಯೆ 14 ರ ಗುರುತಾದ ರೋಡ್ ರೋಲರ್ ಎಂದು ಮಾಹಿತಿ ನೀಡಿರುವ ಸೊಗಡು ಶಿವಣ್ಣ, ಭವಿಷ್ಯದ ತುಮಕೂರು ಮತ್ತು ಸ್ವಾಭಿಮಾನಿ ತುಮಕೂರಿಗರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಮತ್ತು ಈ ಚುನಾವಣೆಯಲ್ಲಿ ಬೆಂಬಲಿಸಿ ಮತದಾರರು ಮತ ನೀಡಿ ಆಶೀರ್ವದಿಸಿದರೆ ನನ್ನ ಜೀವನವಿಡಿ ಮತದಾರರ ಸೇವೆಗೆ 24 ಗಂಟೆ ಸಮಯ ಮುಡಿಪಾಗಿಡುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!