ತುಮಕೂರಿನಲ್ಲಿ ಜ್ಯೋತಿ ಗಣೇಶ್ ರೋಡ್ ಶೋ

ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ

97

Get real time updates directly on you device, subscribe now.


ತುಮಕೂರು: ಪ್ರಸಕ್ತ ರಾಜ್ಯ ವಿಧಾನಸಭೆ ಚುನಾವಣೆಯ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಶನಿವಾರ ತುಮಕೂರು ನಗರದ ಮೂರು ಕಡೆಗಳಲ್ಲಿ ದೇವಾಲಯಗಳಲ್ಲಿ ಪೂಜೆ ಕೈಗೊಂಡು ಭರ್ಜರಿ ರ್ಯಾಲಿ ಕೈಗೊಂಡರು, ಹಲವು ಬಡಾವಣೆಗಳಿಗೆ ತೆರಳಿ ಮತ ಯಾಚನೆ ಮಾಡಿದರು.

ಮರಳೂರು ಶನಿ ಮಹಾತ್ಮ ದೇವಸ್ಥಾನ, ಬಟವಾಡಿಯ ಆಂಜನೇಯ ಸ್ವಾಮಿ, ಹನುಮಂತಪುರದ ಭೈಲಾಂಜನೇಯ ಸ್ವಾಮಿ ದೇವಸ್ಥಾನಗಳಿಂದ ತೆರೆದ ವಾಹನದಲ್ಲಿ ಪ್ರತ್ಯೇಕ ರ್ಯಾಲಿ ನಡೆಸುವ ಮೂಲಕ ಭರ್ಜರಿ ಚುನಾವಣಾ ಪ್ರಚಾರ ಕೈಗೊಂಡರು. ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ನಾಗರಿಕರು ಪಾಲ್ಗೊಂಡು ರ್ಯಾಲಿ ಯಶಸ್ವಿಗೊಳಿಸಿದರು.

ನಗರಸಭೆ ಮಾಜಿ ಅಧ್ಯಕ್ಷರಾದ ಕಮಲಮ್ಮ, ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷರಾದ ಸರೋಜಾ ಗೌಡ, ವಕ್ಕಲಿಗ ಮುಖಂಡರಾದ ದೇವರಾಜ್, ಬೆಳ್ಳಿ ಲೋಕೇಶ್, ವಿವಿಧ ಸಮುದಾಯಗಳ ಮುಖಂಡರಾದ ಅಣೆತೋಟ ಶ್ರೀನಿವಾಸ್, ಹನುಮಂತರಾಜು, ಆದ್ಯಾಗೌಡ, ಮಾಜಿ ಪಾಲಿಕೆ ಸದಸ್ಯ ನಾಗಭೂಷಣ್, ಸತ್ಯಮಂಗಲ ಜಗದೀಶ್, ಟಿ.ಡಿ.ಕೃಷ್ಣಮೂರ್ತಿ, ವೈ.ಟಿ.ರಾಜೇಂದ್ರ, ವಾರ್ಡ್ ಅಧ್ಯಕ್ಷ ವಿಶ್ವನಾಥ ಸ್ವಾಮಿ, ಶೈಲಾ, ಭರತ್ ಮತ್ತಿತರರು ಪಾಲ್ಗೊಂಡಿದ್ದರು.

ಬಿಜೆಪಿ ಅಭ್ಯರ್ಥಿ, ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಗರದ ಇತಿಹಾಸದಲ್ಲೇ ಕಾಣದಷ್ಟು ಅಭಿವೃದ್ಧಿ ಕಾರ್ಯಗಳನ್ನು ಈ ಅವಧಿಯಲ್ಲಿ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ತುಮಕೂರು ನಗರದಲ್ಲಿ ವ್ಯಾಪಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ರಸ್ತೆ, ಕ್ರೀಡಾಂಗಣ, ಆಟದ ಮೈದಾನ, ಉದ್ಯಾನಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಸೇರಿದಂತೆ ನಗರದಲ್ಲಿ ಶಾಂತಿ ವಾತಾವರಣ ನೆಲೆಸಲು, ನಾಗರಿಕರ ಹಿತ ಕಾಪಾಡಲು ಆದ್ಯತೆ ನೀಡಿ ಕೆಲಸ ಮಾಡಿದ್ದೇವೆ. ನಗರದ ಹೆಚ್ಚಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನನಗೆ ಮತ ಚಲಾಯಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!