ಅರಣ್ಯ, ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಜಿಲ್ಲಾಧಿಕಾರಿ

149

Get real time updates directly on you device, subscribe now.


ತುಮಕೂರು: ಮುಂದಿನ ಪೀಳಿಗೆಗೆ ಫೋಟೋದಲ್ಲಿ ಮಾತ್ರ ಹುಲಿ, ಸಿಂಹ, ಚಿರತೆ ತೋರಿಸುವ ಪರಿಸ್ಥಿತಿಯನ್ನು ನಾವುಗಳು ತರಬಾರದು. ಆದುದರಿಂದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಅರಣ್ಯ ಮತ್ತು ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಚಿರತೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ನಡುವೆ ಅಷ್ಟೇನು ಸಂಘರ್ಷವಿರಲಿಲ್ಲ. ಕಾಡು ಪ್ರಾಣಿಗಳ ವಾಸ ಸ್ಥಾನಕ್ಕೆ ಸಾಕಷ್ಟು ಸ್ಥಳಾವಕಾಶವಿತ್ತು. ಈ ಹಿಂದೆ ಮನುಷ್ಯರು ವಾಸಿಸುವ ಸ್ಥಾನಕ್ಕೆ ಅಪರೂಪಕ್ಕೆ ಕಾಡು ಪ್ರಾಣಿಗಳು ಲಗ್ಗೆ ಇಡುತ್ತಿದ್ದವು. ಆದರೆ ಈಗ ಕಾಡು ಪ್ರಾಣಿಗಳು ವಾಸಿಸುವ ಜಾಗಗಳ ಬಳಿ ಮಾನವ ಲಗ್ಗೆ ಇಡುತ್ತಿರುವ ಕಾರಣ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಪ್ರಕರಣ ಹೆಚ್ಚುತ್ತಿವೆ ಎಂದರು.

ಅಂತಾರಾಷ್ಟ್ರೀಯ ಚಿರತೆ ದಿನದ ಉದ್ದೇಶ ಚಿರತೆ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಜಾಗೃತಿ ನೀಡುವುದು ಆಗಿದೆ. ಎರಡನೆಯದಾಗಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಕಡಿಮೆಗೊಳಿಸುವುದು ಹೇಗೆ ಎಂಬುವುದರ ಬಗ್ಗೆ ಬೆಳಕು ಚೆಲ್ಲುವುದು ಹಾಗೂ ಅರಣ್ಯವನ್ನು ಯಾವ ರೀತಿ ರಕ್ಷಣೆ ಮಾಡಬಹುದಾಗಿದೆ ಎಂಬುದರ ಕುರಿತು ಈ ದಿನಾಚರಣೆ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಅರಣ್ಯ ಮತ್ತು ಪ್ರಾಣಿಗಳ ಕುರಿತು ಹೆಚ್ಚಿನ ಆಸಕ್ತಿ ವಹಿಸುತ್ತಿವುದು ಸಂತಸದ ವಿಷಯ. ಅರಣ್ಯ ಹಾಗೂ ಪ್ರಾಣಿಗಳ ರಕ್ಷಣೆ ಕುರಿತು ಮಕ್ಕಳಲ್ಲಿನ ಆಸಕ್ತಿ ಹೆಚ್ಚಾಗಬೇಕು ಎಂದರು.
ಅರಣ್ಯ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳುವವರು ಪರಿಸರ ಕಾಪಾಡುವ ಹೊಣೆ ಹೊರಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಅರಣ್ಯ ಪ್ರದೇಶದಲ್ಲಿ ಸೃಷ್ಟಿಸಬಾರದು. ಇದೊಂದು ಗಂಭೀರ ವಿಷಯವಾಗಿದೆ. ಇದನ್ನು ಅರಿತು ನಾವೆಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದರು.

ತುಮಕೂರು ಟೌನ್ ಹಾಲ್ ವೃತ್ತದಿಂದ ತುಮಕೂರು ವಿಶ್ವ ವಿದ್ಯಾಲಯದ ವರೆಗೆ ವನ್ಯ ಜೀವಿ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ಉಪ ಅರಣ್ಯ ಸಂರಕ್ಷಣಾಕಾರಿ ಅನುಪಮ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!