ಗ್ರಾಮಾಂತರದ ಅಭಿವೃದ್ಧಿಗಾಗಿ ಸುರೇಶ್ ಗೌಡ ಗೆಲ್ಲಿಸಿ

113

Get real time updates directly on you device, subscribe now.


ತುಮಕೂರು: ಒಕ್ಕಲಿಗ ಸಮುದಾಯ ಭಾವನಾತ್ಮಕ ವಿಚಾರಗಳಿಗೆ ಕಿವಿಗೊಡದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಅವರನ್ನು ಗೆಲ್ಲಿಸುವಂತೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ತಿಳಿಸಿದ್ದಾರೆ.
ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿ ಸೌಧದಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮುದಾಯದ ಸಮಾವೇಶ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ.ಸುರೇಶಗೌಡ ಅವರಿಗೆ ಭವಿಷ್ಯದಲ್ಲಿ ಒಳ್ಳೆಯ ನಾಯಕನಾಗಿ ಬೆಳೆಯಲು ಅವಕಾಶವಿದೆ. ಹಾಗಾಗಿ ಅವರ ಬೆನ್ನಿಗೆ ನಿಲ್ಲಬೇಕಿದೆ ಎಂದರು.

ಕರ್ನಾಟಕದ ರಾಜಕಾರಣದಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧ ರಾಜ್ಯದ ಹೆಮ್ಮೆಯ ಪ್ರತೀಕ, ಎಸ್.ಎಂ.ಕೃಷ್ಣ, ಡಿ.ವಿ.ಸದಾನಂದಗೌಡ ರಂತಹ ಹಿರಿಯ ನಾಯಕರು ಮುಖ್ಯಮಂತ್ರಿ ಗಳಾಗಿ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ. ಅವರ ರೀತಿಯಲ್ಲಿಯೇ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಸುರೇಶ್ ಗೌಡ ಅವರಲ್ಲಿದ್ದು, ಗ್ರಾಮಾಂತರದ ಮತದಾರರು ಅವರ ಕೈ ಹಿಡಿಯುವಂತೆ ಮುದ್ದಹನುಮೇ ಗೌಡ ಮನವಿ ಮಾಡಿದರು.

ಮಾಜಿ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಮಾತನಾಡಿ, ನನ್ನ ಹತ್ತು ವರ್ಷಗಳ ಶಾಸಕ ಅವಧಿಯಲ್ಲಿ ಸಮಾಜದ ಘನತೆ ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಒಕ್ಕಲಿಗ ಸಮುದಾಯದ ಜೊತೆಗೆ ಎಲ್ಲಾ ಸಮುದಾಯಗಳಿಗೂ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದೇನೆ. ದೇಶಕ್ಕೆ ಅನ್ನ ನೀಡುವ ರೈತರ ಸಂಕಟ ಕಣ್ಣಾರೆ ಕಂಡು ಅದರ ನಿವಾರಣೆಗಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿದ್ಯುತ್ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ರೈತರ ಕಷ್ಟ ಮನವರಿಕೆ ಮಾಡಿಕೊಟ್ಟು ಪ್ರಾಯೋಗಿಕವಾಗಿ ರೈತರ ಪ್ರತಿ ಐಪಿ ಸೆಟ್ ಗೆ ಒಂದು ಟಿಸಿ ನೀಡುವ ಯೋಜನೆ ತಂದು ಜನರಿಗೆ ಅನುಕೂಲ ಮಾಡಲಾಗಿದೆ. ಇದರ ಫಲವಾಗಿ ನನ್ನಿಂದ ದೂರವಾಗಿದ್ದ ಒಕ್ಕಲಿಗ ಇನ್ನಿತರ ಜಾತಿಯ ಮುಖಂಡರು ನನ್ನೊಂದಿಗೆ ಬಂದಿದ್ದಾರೆ. ಇದು ನನಗೆ ಆನೆ ಬಲ ತಂದುಕೊಟ್ಟಿದೆ. ಯಾರಿಗೂ ಮೋಸ ಮಾಡಿಲ್ಲ. ಈ ಬಾರಿ ನಾನು ಶಾಸಕನಾಗುವಂತೆ ಆಶೀರ್ವದಿಸಿದರೆ ಗ್ರಾಮಾಂತರ ಕ್ಷೇತ್ರ ಇಡೀ ರಾಜ್ಯದಲ್ಲಿಯೇ ಅತ್ಯಂತ ಪ್ರಗತಿ ಹೊಂದಿದ ಕ್ಷೇತ್ರವಾಗಲಿದೆ ಎಂಬ ಆಶ್ವಾಸನೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮಾಂತರ ಒಕ್ಕಲಿಗ ಮುಖಂಡರಾದ ಮಾಸ್ತಿಗೌಡ, ವೈ.ಟಿ.ನಾಗರಾಜು, ಬೆಳಗುಂಬ ಕೆಂಪರಾಜು, ಬೆಳ್ಳಿ ಲೋಕೇಶ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸಿದ್ದೇಗೌಡ, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ವಿಜಯಕುಮಾರ್, ಮಾಜಿ ಜಿಪಂ ಸದಸ್ಯ ರಾಜೇಗೌಡ, ಬೆಳಗುಂಬ ನರಸಿಂಹ ಮೂರ್ತಿ, ತಾರಾದೇವಿ, ಸುಮಿತ್ರಾ ದೇವಿ,ರೇಣುಕಮ್ಮ, ಹನುಮಂತರಾಜು, ಯೋಗಿಶ್ ಗೌಡ, ಪಂಚೆ ರಾಮಚಂದ್ರಪ್ಪ, ಜಯಂತ್ ಗೌಡ, ರೈತ ಸಂಘ ಯತೀಶ್, ದೇವರಾಜು, ಅಡ್ವಕೇಟ್ ನಾಗರಾಜ್, ತಮ್ಮಯ್ಯಣ್ಣ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!