ಜೆಡಿಎಸ್ ಅಧಿಕಾರಕ್ಕೆ ಬರುವುದು ಸ್ಪಷ್ಟ: ಡಾ.ರವಿ

82

Get real time updates directly on you device, subscribe now.


ಕುಣಿಗಲ್: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ಸ್ಪಷ್ಟ ಲಕ್ಷಣಗಳಿದ್ದು, ಪಂಚರತ್ನ ಯೋಜನೆ ಸೇರಿದಂತೆ ಇತರೆ ಜನಪ್ರಿಯ ಯೋಜನೆ ಅನುಷ್ಠಾನಕ್ಕೆ ಮತದಾರರು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಜೆಡಿಎಸ್ ಅಭ್ಯರ್ಥಿ ಡಾ.ರವಿ ಮನವಿ ಮಾಡಿದರು.

ಗುರುವಾರ ತಾಲೂಕಿನ ಅಮೃತೂರು ಹೋಬಳಿಯ ವಿವಿಧೆಡೆಗಳಲ್ಲಿ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಐದು ವರ್ಷ ಶಾಸಕರಾಗಿ ಯಾವುದೇ ಅಭಿವೃದ್ಧಿ ಮಾಡದೆ ಆಮೀಷ ಒಡ್ಡಿ ಮತ ಕೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಉತ್ತಮ ಅಧಿಕಾರ ಹೊಂದಿದ್ದರೂ ಜನತೆಗೆ ಸೇವೆ ನೀಡಲಾಗದೆ ಮೂರು ಸಲ ಸೋತೆ ಎಂಬ ಅನುಕಂಪದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ ಎಂದರು.

ಸೋಲಿನ ಹತಾಶೆಯಿಂದಾಗಿ ಬಿಜೆಪಿ ಅಭ್ಯರ್ಥಿ, ಜೆಡಿಎಸ್ ಪಕ್ಷದ ಅಭ್ಯರ್ಥಿ ಡಮ್ಮಿ ಅಭ್ಯರ್ಥಿಯಾಗಿದ್ದು ಕೊನೆ ಕ್ಷಣದಲ್ಲಿ ಅವರು ನಮಗೆ ಬೆಂಬಲಿಸುತ್ತಾರೆಂದು ಮತದಾರರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಮತದಾರರು ಇವರ ಮಾತಿಗೆ ಮರುಳಾಗದೆ ತಾಲೂಕಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಬೆಂಬಲಿಸಬೇಕೆಂದರು.

ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಸ್ತ್ರಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ, ಗ್ರಾಮಾಂತರ ಪ್ರದೇಶದ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಗುಣಮಟ್ಟದ ಶಿಕ್ಷಣ ನೀಡಲು ಹೋಬಳಿಗೊಂದು ಹೈಟೆಕ್ ಶಾಲೆ, ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ಥೆ, ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ಯೋಜನೆ ಹಣ ಹೆಚ್ಚಳ, ವೃದ್ಧಾಪ್ಯ ವೇತನದ ಗಣನೀಯ ಹೆಚ್ಚಳ ಮಾಡುವ ಜೊತೆಯಲ್ಲಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು. ವಾರ್ಷಿಕ ಐದು ಸಿಲೆಂಡರ್ ಉಚಿತ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಸಹ ದೂರದೃಷ್ಟಿ ಹೊಂದಿದ್ದು ತಾಲೂಕಿನ ಸಮಗ್ರ ನೀರಾವರಿ ಯೋಜನೆ ಪರಿಣಾಮಕಾರಿ ಅನುಷ್ಠಾನ, ತಾಲೂಕಿನಲ್ಲಿ ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಸೂಕ್ತ ಉದ್ಯೋಗ ವ್ಯವಸ್ಥೆ ನಿರ್ಮಾಣಕ್ಕೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಕೈಗಾರಿಕೆ ಸ್ಥಾಪನೆಗೆ ಹೆಚ್ಚು ಒತ್ತು ಸೇರಿದಂತೆ ನಗರ ಪ್ರದೇಶದಲ್ಲೂ ಉತ್ತಮ ಅಭಿವೃದ್ಧಿಗೆ ಚಿಂತನೆ ಕೈಗೊಳ್ಳಲಾಗಿದೆ. ಈ ಬಾರಿ ತಾಲೂಕು ಹಾಗೂ ರಾಜ್ಯದ ಪ್ರಗತಿಗೆ ಜೆಡಿಎಸ್ ಬೆಂಬಲಿಸಬೇಕೆಂದರು.

ಹಿಂದೆ ಅಮೃತೂರು ಜಪಂ ಸದಸ್ಯರಾಗಿ, ಈ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದ ಕಾರಣ ಯಡವಾಣಿ ಗ್ರಾಮಕ್ಕೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ಡಾ.ರವಿಯವರನ್ನು ಅಭಿಮಾನಿಗಳು ಹೂವಿನ ಮಳೆಗೈದು ಸ್ವಾಗತಿಸಿದರಲ್ಲದೆ 21 ತೆಂಗಿನಕಾಯಿ ಈಡುಗಾಯಿ ಹೊಡೆದು ಹೆಗಲ ಮೇಲೆ ಹೊತ್ತು ಸ್ವಾಗತಿಸಿದರು. ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಮುಖಂಡರಾದ ಅರುಣಕುಮಾರ, ಹೇಮರಾಜ, ಅಶ್ವಥ, ಉಂಗ್ರ ನಾಗರಾಜ, ಶಿವರಾಮ, ವಿರೂಪಾಕ್ಷ, ಯೋಗೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!