ತುಮಕೂರು: ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು, ಸೋಮಾರಿಗಳ ಸ್ವತ್ತಲ್ಲ, ವಿದ್ಯಾರ್ಥಿ ಜೀವನದ ಪ್ರತಿ ಹಂತಗಳಲ್ಲಿಯೂ ವಿದ್ಯಾರ್ಥಿಗಳ ಗಮನ ಸದಾ ಗುರಿ ಮುಟ್ಟುವುದರ ಕಡೆ ಇರಬೇಕು. ಹೀಗಾದಲ್ಲಿ ಮಾತ್ರವೇ ಗೆಲುವು ಸುಲಭ ಸಾಧ್ಯ ಎಂದು ಬೆಂಗಳೂರಿನ ಯುಎಸ್ ಡಿಸಿ ಗ್ಲೋಬಲ್ ನ ಚಾನೆಲ್ ಬ್ಯುಸಿನೆಸ್ ಮುಖ್ಯಸ್ಥ ಶಾಜನ್ ಸ್ಯಾಮುಯಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ವಿದ್ಯಾವಾಹಿನಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕಾಲೇಜಿನ ಎಂಸಿಎ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿ- ರೈಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧಿಸುವ ಸಮಯದಲ್ಲಿ ಸವಾಲುಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಇದರಿಂದಾಗಿ ಆತ್ಮವಿಶ್ವಾಸ ದೊಂದಿಗೆ ಗುರಿ ತಲುಪಲು ಸಾಧ್ಯ ಎಂದರು.
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸಾಧನೆಗೆ ಸದಾಕಾಲ ಪ್ರೋತ್ಸಾಹ ಹಾಗೂ ಬೆಂಬಲ ದೊರೆಯುತ್ತಿದೆ ಎಂದರು. ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದೇಶ – ವಿದೇಶಗಳ ಪ್ರತಿಷ್ಠಿತ ಕಂಪೆನಿಗಳಲ್ಲಿ ಉತ್ತಮ ಉದ್ಯೋಗ ದೊರಕಿಸಿ ಕೊಡುವುದು ಮುಖ್ಯ ಗುರಿಯಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಮೌಲ್ಯಯುತ ಇಂಟರ್ ಷಿಪ್ ಹಾಗೂ ಕೌಶಲ್ಯಭರಿತ ಪ್ರಾಜೆಕ್ಟ್ ಮಾಡಲು ಉತ್ತಮ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರು ಮೂಲದ ಸಾಪ್ಟ್ ಸ್ಕಿಲ್ಸ್ ತರಬೇತುದಾರರು, ಫೆಸಿಲಿಟೇಟರ್ ಹಾಗು ಇಮೇಲ್ ಕೋಚ್ ಆದ ಲಲಿತ ಮೊದಾಲಿ ಮಾತಾನಾಡಿ, ವಿದ್ಯಾರ್ಥಿಗಳು ತಮಗೆ ಎದುರಾಗುವ ಯಾವುದೇ ಸಮಸ್ಯೆಗಳಿಗೆ ಅಂಜದೆ, ಆ ಸಮಸ್ಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ದೇಹಾರೋಗ್ಯ ಉತ್ತಮವಾಗಿದ್ದರೆ ಮಾನಸಿಕ ಆರೋಗ್ಯವೂ ಚುರುಕಾಗಿರುತ್ತದೆ. ಹಾಗಾಗಿ ದೇಹವನ್ನು ವ್ಯಾಯಾಮಗಳ ಮೂಲಕ ದಂಡಿಸಿ ಸದಾಕಾಲ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿ-ರೈಸ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿನ ಕೀಯಾಶೀಲತೆ, ಬುದ್ಧಿಮತ್ತೆ ಹಾಗೂ ಕೌಶಲ್ಯತೆ ಪ್ರದರ್ಶಿಸುವ ಉತ್ತಮ ವೇದಿಕೆಯಾಗಿದ್ದು, ಈ ಸಂದರ್ಭದಲ್ಲಿ ಎಂಸಿಎ ವಿದ್ಯಾರ್ಥಿಗಳು ತಾವೇ ಸ್ವತಃ ವಿನ್ಯಾಸಗೊಳಿಸಿ ನಿರ್ಮಾಣ ಮಾಡಿದ್ದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕುರಿತಾದ ಅಂಡ್ರ್ಯಾಯಿಡ್ ಆ್ಯಪ್ ಅನ್ನು ಅತಿಥಿ ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಎಂಸಿಎ ವಿಭಾಗದ ಸಂಯೋಜಕ ಮಧುಪ್ರಿಯ, ಪ್ರಾಧ್ಯಾಪಕರಾದ ಯತೀಶ್, ಅಮೂಲ್ಯ ಇನ್ನಿತರರು ಇದ್ದರು.
Comments are closed.