ತುಮಕೂರು: ತುಮಕೂರು ನಗರದ ಪಕ್ಷೇತರ ಅಭ್ಯರ್ಥಿಯಾದ ನರಸೇಗೌಡ ಚುನಾವಣಾ ಕಣದಿಂದ ನಿವೃತ್ತಿ ಹೊಂದಿ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನರಸೇಗೌಡ ಮಾತನಾಡಿ, ಪಕ್ಷ ಸಿದ್ಧಾಂತ, ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿರವರ ಆಡಳಿತ ಮೆಚ್ಚಿ ಹಾಗೂ ತುಮಕೂರು ನಗರದ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಅವರ ಸರಳತೆ- ಸಜ್ಜನಿಕೆ, ಆಡಳಿತ ವೈಖರಿ ಮೆಚ್ಚಿ ನಾನು ಪಕ್ಷೇತರ ಅಭ್ಯರ್ಥಿಯಿಂದ ನಿವೃತ್ತಿ ಹೊಂದಿ ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡಿದ್ದೇನೆ. ಬಿಜೆಪಿ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.
ಸಂಸದರಾದ ಜಿ.ಎಸ್.ಬಸವರಾಜ್, ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ್ ಜೆ.ಜಗದೀಶ್, ತುಮಕೂರು ನಗರ ಮಂಡಲ ಕಾರ್ಯದರ್ಶಿ ರಾಧ ಗಂಗಾಧರ್ ಹಾಗೂ ಪ್ರಮುಖರು ಭಾಗವಹಿಸಿದ್ದರು.
Comments are closed.