ಹುಳಿಯಾರು: ಭಗ್ನ ಪ್ರೇಮಿಯೊಬ್ಬ ಮನೆಗೆ ನುಗ್ಗಿ ತನ್ನ ಪ್ರೇಯಸಿಗೆ ಮಚ್ಚಿನಿಂದ ಹಲ್ಲೆ ನಡೆಸಿ ನಂತರ ಕಲ್ಯಾಣಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಳಿಯಾರು ಹೋಬಳಿ ಭಟ್ಟರಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತಪಟ್ಟಿರುವ ಭಗ್ನ ಪ್ರೇಮಿ ಇದೇ ಗ್ರಾಮದ ನಿವಾಸಿ ವಿನಯ್ (25) ಹಾಗೂ ಹಲ್ಲೆಗೆ ಒಳಗಾದ ಪ್ರೇಯಸಿ ಕತ್ತಿಗೆ ಸಾಕಷ್ಟು ಗಾಯಗಳಾಗಿ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಘಟನೆ: ಹುಡುಗಿ ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿಕೊಂಡು ಗ್ರಾಮಕ್ಕೆ ಬಂದು ತನ್ನ ನಿವಾಸದಲ್ಲಿ ವಾಸವಿದ್ದರು. ಈ ಯುವತಿಯನ್ನ ಪ್ರೀತಿಸುತ್ತಿದ್ದ ವಿನಯ್ ಗುರುವಾರ ಮನೆಗೆ ನುಗ್ಗಿ ಮಚ್ಚಿನಿಂದ ಪ್ರೇಯಸಿಯ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ನಂತರ ಸಾಕಷ್ಟು ಗಾಯಗೊಂಡಿದ್ದ ಪ್ರೇಯಸಿಯನ್ನು ಹುಳಿಯಾರು, ತಿಪಟೂರು ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಾರಿಯಾಗಿದ್ದ ಭಗ್ನ ಪ್ರೇಮಿ ವಿನಯ್ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ. ನಂತರ ಸಂಜೆಯೋಳಗೆ ವಿನಯ್ ಮೃತ ದೇಹವು ಇದೇ ಗ್ರಾಮದ ಕಲ್ಯಾಣಿಯಲ್ಲಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಮಕ ದಳದವರು ಆಗಮಿಸಿ ಕಲ್ಯಾಣಿಯಿಂದ ಮೃತ ದೇಹ ತೆಗೆಯಲಾಗಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Comments are closed.