ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತ

ಐದು ಅಂಶ ಗ್ಯಾರಂಟಿ ಜಾರಿಗೆ ತರುವುದು ನಿಶ್ಚಿತ: ಡಾ.ಪರಮೇಶ್ವರ್

186

Get real time updates directly on you device, subscribe now.


ತುಮಕೂರು: ವಿಧಾನಸಭೆ ಚುನಾವಣೆ ಪ್ರತಿಷ್ಠಿತ ವಾಗಿ ನಡೆದಿದೆ. ಜನ ಬದಲಾವಣೆ ಬಯಸಿದ್ದರು, ಅದು ಈಗ ಎದ್ದು ಕಾಣುತ್ತಿದೆ. ಹೊಸ ಓಟರ್ ಆಡ್ ಆಗಿ ಮತ ಚಲಾಯಿಸಿ ಬದಲಾವಣೆ ತಂದಿದ್ದು ಚುನಾವಣಾ ಚಿತ್ರಣವೇ ಬದಲಾಗಲಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಉತ್ತಮ ಮತದಾನ ಆಗಿದೆ. ಜನ ರಾಜಕೀಯವಾಗಿ ಪ್ರಜ್ಞಾವಂತರಾಗಿದ್ದಾರೆ. ಮತದಾನ ಮಾಡಿದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಒಂದೆರಡು ಸಮೀಕ್ಷೆ ಬಿಟ್ಟರೆ ಬಹುತೇಕ ಸಮೀಕ್ಷೆಗಳು ಕೂಡ ಕಾಂಗ್ರೆಸ್ ಪರವೇ ಹೇಳಿವೆ. ಕಾಂಗ್ರೆಸ್ ಸರ್ಕಾರ ಮಾಡುವುದು ಖಚಿತ. ನಾವು ಕೊಟ್ಟಿರುವ ಭರವಸೆ ನಂಬಿ ಮತದಾರ ಮತ ಹಾಕಿರಬಹುದು. ನಾವು ನೀಡಿರುವ ಐದು ಗ್ಯಾರಂಟಿ ಜಾರಿಗೆ ತರಲಿದ್ದೇವೆ ಎಂದರು.

ಸಿಎಂ ಸ್ಥಾನಕ್ಕೆ ಬಹಳಷ್ಟು ನಾಯಕರು ಆಕಾಂಕ್ಷಿಗಳು ಇದ್ದಾರೆ. ನಮ್ಮ ವರಿಷ್ಠರು ಸಿಎಂ ಯಾರಾಗಬೇಕು ಎಂಬುದನ್ನು ತೀರ್ಮಾನ ಮಾಡಲಿದ್ದಾರೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಈ ಬಾರಿ ಚುನಾವಣೆ ವಿಭಿನ್ನವಾಗಿ ನಡೆದಿದೆ. ಜನ ಪ್ರಜ್ಞಾವಂತರಾಗಿ ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲೂ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯಲಿದ್ದೇವೆ ಎಂದರು.

ಮಾಜಿ ಶಾಸಕ, ಮಧುಗಿರಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ. ಕೆಲವು ಕ್ಷೇತ್ರದಲ್ಲಿ ಕಡಿಮೆ ಆಗಿದೆ. ಮತದಾನ ಮಾಡದಿದ್ದರೆ ಸರ್ಕಾರದ ಸೌಲಭ್ಯ ಸಿಗದಂತೆ ಕಾಯ್ದೆ ತಂದರೆ ಮತದಾನದಲ್ಲಿ ಹೆಚ್ಚು ಭಾಗವಹಿಸಲಿದ್ದಾರೆ ಎಂದರು.

ಭಜರಂಗಿ, ಭಜರಂಗದಳಕ್ಕೂ ಏನು ಸಂಬಂಧ, ಸಮಾಜದಲ್ಲಿ ಶಾಂತಿ ಕದಡುವ ಸಂಘಟನೆಗಳು ಬ್ಯಾನ್ ಆಗಲೇಬೇಕು. ಅದು ನಮ್ಮ ಉದ್ದೇಶ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ, ಗಂಗಹನುಮಯ್ಯ, ಮುರುಳೀಧರ ಹಾಲಪ್ಪ, ರಾಯಸಂದ್ರ ರವಿಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!