ಕೆ.ಎನ್.ರಾಜಣ್ಣಗೆ ಸಹಕಾರ ಖಾತೆ ನೀಡಲು ಆಗ್ರಹ

82

Get real time updates directly on you device, subscribe now.


ಮಧುಗಿರಿ: ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಕೆ.ಎನ್.ರಾಜಣ್ಣನವರನ್ನು ಸಹಕಾರ ಸಚಿವರನ್ನಾಗಿ ಮಾಡಬೇಕು ಎಂದು ಜಾಮೀಯಾ ಮಸೀದಿ ನಿರ್ದೇಶಕ ಎಸ್.ಕೆ.ಸೈಯದ್ ಕರೀಂ ಒತ್ತಾಯಿಸಿದರು.

ಪಟ್ಟಣದ ಜಾಮಿಯಾ ಮಸೀದಿಯ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಧುಗಿರಿ ಸಾಮಾನ್ಯ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಅತಿ ಹೆಚ್ಚಿನ ಮತ ಗಳಿಕೆಯಿಂದ ಜಯಬೇರಿ ಗಳಿಸಿರುವ ಕೆ.ಎನ್.ರಾಜಣ್ಣ ಅವರು ಶಾಸಕರಾಗಿದ್ದಾರೆ. ಅವರು ಮೂರನೇ ಬಾರಿ ಶಾಸಕರಾಗಿದ್ದು, ಈ ಹಿಂದೆ ಅರ್ಹತೆಯಿದ್ದರೂ ಸಚಿವರಾಗುವ ಅವಕಾಶದಿಂದ ವಂಚಿತರಾಗಿದ್ದು, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನವರು ರಾಜಣ್ಣನವರನ್ನು ಸಚಿವರನ್ನಾಗಿ ಮಾಡಿ ಸಹಕಾರ ಖಾತೆ ನೀಡಬೇಕು ಎಂದು ಕ್ಷೇತ್ರದ ಮುಸ್ಲಿಂ ಪ್ರಜೆಗಳ ಮನವಿಯಾಗಿದ್ದು, ಅವರು ಸಚಿವರಾದರೆ ಕ್ಷೇತ್ರದ ಅಭಿವೃದ್ಧಿಯಾಗಲಿದ್ದು, 5 ಕಾಂಗ್ರೆಸ್ ಗ್ಯಾರಂಟಿಗಳ ಜೊತೆಗೆ ರೋಪ್ ವೇ, ರೈಲ್ವೆ ಕಾಮಗಾರಿ, ಜಿಲ್ಲೆ ಎತ್ತಿನಹೊಳೆ ಯೋಜನೆಯಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳಿಗೆ ವೇಗ ದೊರೆಯಲಿದೆ ಎಂದರು.

ಉಪಾಧ್ಯಕ್ಷ ಮಹಮದ್ ಜಾಫರ್ ಸಾದಿಕ್ ಮಾತನಾಡಿ, ಶಾಸಕ ಜಮೀರ್ ಅಹಮದ್ ಅವರನ್ನು ಡಿಸಿಎಂ ಮಾಡಿ, ಕೆ.ಎನ್.ರಾಜಣ್ಣ ಅವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಿದರೆ ರಾಜ್ಯದ ಬಡವರ ಅಭಿವೃದ್ಧಿಯಾಗಲಿದೆ ಎಂದರು.

ಜಾಮಿಯ ಮಸೀದಿ ಅಧ್ಯಕ್ಷ ಅಬ್ದುಲ್ ಅಲಿಂ ಪಾಷಾ, ಉಪಾಧ್ಯಕ್ಷ ಮಹಮ್ಮದ್ ಜಾಫರ್ ಸಾಧಿಕ್, ನಿರ್ದೇಶಕರಾದ ಎಸ್.ಕೆ.ಸೈಯದ್ ಕರೀಂ, ಯೂಸಫ್ ಶರೀಫ್, ಫಯಾಜ್ ಅಹ್ಮದ್, ಇಲಿಯಾಸ್, ಕಲೀಮ್ ಮುಲ್ಲಾ, ಇನಾಯತ್ ಉಲ್ಲಾ, ಅತೀಮ್ ಭೈಜು, ಭಕ್ಷಿಸಾಬ್, ತಬ್ರೇಜ್, ಹೆಚ್.ಎಂ.ನಯಾಜ್, ಅಪ್ರೋಜ್, ಇರ್ಫಾನ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!