ತುಮಕೂರು: ಸಿಎಸ್ ಫೌಂಡೇಷನ್ ಪರೀಕ್ಷೆಯಲ್ಲಿ ವಿದ್ಯಾನಿಧಿ ಕಾಲೇಜಿನ ಐದು ಮಂದಿ ವಿದ್ಯಾರ್ಥಿಗಳು ಉತ್ತಮ ನಿರ್ವಹಣೆ ತೋರಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ, ಕುಶಾಲ್ ಕಂಕರಿಯಾ (166), ಶಬಾದಿ ನೇಹಾ (146), ಸಂಜನಾಎಲ್.ಎಸ್. (145), ಪ್ರಿಯಾಂಕ.ಪಿ.ಜಿ. (132), ಭವಾನಿ.ಎಸ್. (124) ಹರ್ಷಿತ್.ಜೆ. (100) ಅಂಕ ಗಳಿಸಿ ಈ ಸಾಧನೆ ತೋರಿದ್ದಾರೆ.
ಪಿಯುಸಿ ಹಂತದಿಂದಲೇ ವೃತ್ತಿಪರತೆ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ಪಠ್ಯದೊಂದಿಗೆ ಸಿಎ ಮತ್ತು ಸಿಎಸ್ ಫೌಂಡೇಷನ್ ತರಗತಿ ನಡೆಸಿ ಅದಕ್ಕೆ ಪೂರಕವಾದ ಕಲಿಕೆಗೆ ಅನುವು ಮಾಡಿಕೊಟ್ಟಿರುವುದನ್ನು ವಿದ್ಯಾರ್ಥಿಗಳು ಧನಾತ್ಮಕವಾಗಿ ಸ್ವೀಕರಿಸಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಪದವಿ ಮುಗಿಯುವ ಹಂತದಲ್ಲಿ ವಿದ್ಯಾರ್ಥಿಗಳು ಸಿಎಸ್ ಪ್ರೊಫೆಷನಲ್ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ಇತರ ವಿದ್ಯಾರ್ಥಿಗಳು ಇನ್ನೂ ಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟರಲ್ಲಿ ಇಂತಹ ಮಕ್ಕಳು ತಮ್ಮ ಕಾಲ ಮೇಲೆ ನಿಂತಿರುತ್ತಾರೆ ಎಂಬುದು ಎಲ್ಲ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕವಾಗಲಿ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಶ್ಲಾಘಿಸಿದರು.
ಪ್ರತಿವರ್ಷ ನಮ್ಮ ಸಂಸ್ಥೆಯಲ್ಲಿ ಸಿಎ, ಸಿಎಸ್ ಫೌಂಡೇಷನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ನಮಗೆ ಸಂತೋಷದ ಸಂಗತಿ, ಮಕ್ಕಳಿಗೆ ಅಗತ್ಯವಿರುವ ಅವಕಾಶ, ಅನುಕೂಲ ಕಲ್ಪಿಸಿಕೊಟ್ಟರೆ ಅವರು ಖಂಡಿತವಾಗಿಯೂ ಶ್ರೇಷ್ಠತೆ ಮೆರೆಯುತ್ತಾರೆ. ತಮ್ಮ ಗುರಿಯೆಡೆಗೆ ನಡೆಯುವುದಕ್ಕೆ ಬೇಕಾದ ಉತ್ತೇಜನವೊಂದಿದ್ದರೆ ಮಕ್ಕಳು ಏನನ್ನಾದರೂ ಸಾಧಿಸಬಲ್ಲರು. ಈ ಮಕ್ಕಳ ಸಾಧನೆ ಮುಂದಿನ ವರ್ಷಗಳಲ್ಲಿ ಇನ್ನೂ ಅನೇಕರಿಗೆ ಮಾದರಿಯಾಗಲಿ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಬಿ.ಜಯಣ್ಣ ಪ್ರಶಂಸಿಸಿದರು.
ಪ್ರಥಮ ಪಿಯುಸಿಗೆ ಸೇರುವ ಹಂತದಲ್ಲಿಯೇ ನಮಗೆ ಈ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಿಳಿಸಿಕೊಟ್ಟಿರುವುದಲ್ಲದೇ ಪ್ರತಿ ವಾರವೂ ಹೆಚ್ಚುವರಿಯಾಗಿ ಸಿಎ, ಸಿಎಸ್ ಬೋಧನಾ ತರಗತಿಗಳನ್ನು ನಡೆಸುತ್ತಿದ್ದರು. ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಾಗ ಯಾವುದೇ ಒತ್ತಡವಿಲ್ಲದಂತೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ ಎಂಬುದನ್ನು ಅರ್ಥೈಸಿದರು, ನಮ್ಮ ಗುರಿಯನ್ನುಒಂದು ಹೆಜ್ಜೆ ಹತ್ತಿರವಾಗಿಸಿಕೊಂಡ ಬಗ್ಗೆ ಹೆಮ್ಮೆಯೆನಿಸುತ್ತದೆ. ಇದಕ್ಕೆ ಕಾರಣವೆನಿಸಿದ ನಮ್ಮ ವಿದ್ಯಾನಿಧಿ ಕಾಲೇಜಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಧಕರನ್ನುಅಭಿನಂದಿಸಲಾಯಿತು. ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ.ಎಸ್.ಆರ್, ತರಬೇತುದಾರರಾದ ಸಿ.ಎಸ್.ಪ್ರೇಮ್, ಜೆ.ಪಿ.ಸುಧಾಕರ್ ಮತ್ತು ಉಪನ್ಯಾಸಕ ವೃಂದ ಹಾಜರಿದ್ದರು.
Comments are closed.