ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಸಹಿಸಲ್ಲ

162

Get real time updates directly on you device, subscribe now.


ತಿಪಟೂರು: ನಗರದ ಹಾಗೂ ರಾಜ್ಯದ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆದರೆ ಭಾರತೀಯ ಜನತಾ ಪಕ್ಷವು ಸಹಿಸುವುದಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಗೃಹ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನೂತನವಾಗಿ ಶಾಸಕರಾಗಿರುವ ಕೆ.ಷಡಕ್ಷರಿಯವರಿಗೆ ಅಭಿನಂದನೆ ಸಲ್ಲಿಸಿ ಅನೇಕ ಸುಳ್ಳು ಆರೋಪ ಹಾಗೂ ಜಾತಿ ಮುಂದಿಟ್ಟುಕೊಂಡು ತಾಲೂಕಿನಲ್ಲಿ ಲಿಂಗಾಯತ ಸಮಾಜಕ್ಕೆ ಒತ್ತಡವಿದ್ದರೂ ಅಭಿವೃದ್ಧಿ ಪರವಾಗಿ, ನನ್ನ ಪರವಾಗಿ ಮತ ಕೇಳಿದರೂ ನನಗೆ 54 ಸಾವಿರ ಮತ ನೀಡಿದ ಹಿಂದೂ ಸಮಾಜದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಅವರ ಋಣ ಮುಂದಿನ ದಿನಗಳಲ್ಲಿ ತೀರಿಸುತ್ತೇನೆ ಎಂದರು.

ಹಿಂದೂ ಸಮಾಜದ ಎಲ್ಲರ ಮೇಲೂ ಸಹ ಇದೇ ರೀತಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುತ್ತಾರೆಂದು ಆಯಾ ಸಮಾಜದ ಮೇಲೆ ಒತ್ತಡ ಹಾಕಲಾಯಿತು, ಮುಸಲ್ಮಾನರ ಮತದಿಂದ ಗೆಲುವು ಸಾಧಿಸಲಾಗಿದೆ ಎಂದು ಅವರಿಂದ ದೌರ್ಜನ್ಯ ಮಾಡಲು ಬಿಟ್ಟರೆ ನಾನು ಸಹಿಸುವುದಿಲ್ಲ.
ಚುನಾವಣೆ ಮುಗಿದು ಕೇವಲ 24 ಗಂಟೆಯಲ್ಲಿ ಫಲಿತಾಂಶ ಬಂದ ನಂತರ ದೇವಸ್ಥಾನ ಹಾಗೂ ಮನೆಗಳ ಮುಂದೆ ಮುಸ್ಲಿಂ ಗೂಂಡಾಗಳು ಪಟಾಕಿ ಹಚ್ಚಿ ಕೂಗಾಡಿದ್ದಾರೆ. ಗೋ ಹತ್ಯೆ ಮುಂದುವರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗೇನಾದರೂ ಮುಂದುವರೆದರೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಗಾಂಧಿ ನಗರದಲ್ಲಿ ವಾಟರ್ ಟ್ಯಾಂಕ್ ಮೇಲೆ ಹಸಿರು ಧ್ವಜ ಹಾಕಿದ್ದಾರೆ. ಕೂಡಲೇ ಆಡಳಿತ ವರ್ಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಭಟ್ಕಳದ ಸರ್ಕಲ್ ನಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದಾರೆ. ಬೆಳಗಾಂನಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಲಾಗಿದೆ. ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ. ಶಿರಸಿಯಲ್ಲಿ ದೇವಸ್ಥಾನದ ಮುಂಭಾಗ ಪಟಾಕಿ ಹಚ್ಚಲಾಗಿದೆ. ಇಂತಹ ಪ್ರಕರಣಗಳಿಗೆ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಾವು ಕೊಬ್ಬರಿಗೆ ಹೆಚ್ಚಿನ ಬೆಂಬಲ ಬೆಲೆ ಕೊಡಿಸಬೇಕೆಂದು ಪ್ರಯತ್ನ ಮಾಡಿದ್ದೆವು. ಆದರೆ ಯಶಸ್ವಿಯಾಗಲಿಲ್ಲ, ಸಿದ್ದರಾಮಯ್ಯ ಹಾಗೂ ತಾಲೂಕಿನ ಶಾಸಕರು ಸರ್ಕಾರ ಬಂದ ನಂತರ ಕ್ವಿಂಟಾಲ್ ಕೊಬ್ಬರಿಗೆ 15,000 ಕೊಡಿಸುತ್ತೇವೆಂದು ಹೇಳಿದ್ದರು. ಅದರಂತೆ ನೊಂದಿರುವ ರೈತರಿಗೆ ನೀವು ಆಡಿರುವ ಮಾತಿನಂತೆ ಕ್ಟಿಂಟಾಲ್ ಕೊಬ್ಬರಿಗೆ ರೂ. 15000 ಕೊಡಿಸಬೇಕೆಂದರು.
ತಾಲೂಕಿನ ಅಭಿವೃದ್ಧಿಗಾಗಿ ಶಾಸಕರು ಕೆಲಸ ಮಾಡುತ್ತಾರೆ. ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡುವುದಿಲ್ಲವೆಂಬ ವಿಶ್ವಾಸವಿದೆ. ಗ್ರಾಮೀಣ ಭಾಗದ, ನಗರದ ಅಭಿವೃದ್ಧಿ ಕೆಲಸ, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮುಂದುವರೆಸಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ದಿವಾಕರ್, ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್, ಎಸ್ಸಿ ಮೋರ್ಚಾ ಸಂಚಾಲಕ ಗಂಗರಾಜು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಸಿಲೇಹಳ್ಳಿ ಜಗದೀಶ್ ಇದ್ದರು

Get real time updates directly on you device, subscribe now.

Comments are closed.

error: Content is protected !!