ಕಾರ್ಯಕರ್ತರಿಗಾಗಿ ಸದಾ ಹೋರಾಡುವೆ: ಮಸಾಲೆ

142

Get real time updates directly on you device, subscribe now.


ತುರುವೇಕೆರೆ: ಕಾರ್ಯಕರ್ತರೇ ಚುನಾವಣೆಯಲ್ಲಿ ನಾನು ಸೋತಿದ್ದೇನೆಂದು ಅಧೀರರಾಗದಿರಿ, ನಿಮಗಾಗಿ ನನ್ನ ಪ್ರಾಣ ಒತ್ತೆ ಇಟ್ಟು ಹೋರಾಟ ಮಾಡುವೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಅಂದು ನಾನು ಗೆದ್ದಾಗ ಬೀಗಿದವನೂ ಅಲ್ಲ, ಇಂದು ಸೋತಿದ್ದೇನೆಂದು ಕುಗ್ಗುವುದೂ ಇಲ್ಲ. ಕಾರ್ಯಕರ್ತರೇ ನಿಮಗಾಗಿ ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ. ಕೃಷ್ಣಪ್ಪನವರದು ಗೆಲುವು ಕೇವಲ ತಾತ್ಕಾಕ, ಮುಂದಿನ ದಿನಗಳಲ್ಲಿ ಕೃಷ್ಣಪ್ಪನ ಆಡಳಿತಕ್ಕೆ ಕ್ಷೇತ್ರದ ಅಮಾಯಕ ಜನತೆ ಬಲಿಯಾಗುತ್ತಾರೆ ಎಂದರು.

ವಾಮಚಾರದ ಗೆಲುವು
ಚುನಾವಣೆಯ ಮುನ್ನಾ ದಿನ ನಮ್ಮ ತೋಟದ ಮನೆಯ ಎರಡೂ ಗೇಟ್ ಬಳಿ ವಾಮಚಾರ ನಡೆಸಲಾಗಿತ್ತು, ಕೃಷ್ಣಪ್ಪ ವಾಮಚಾರದ ಮೂಲಕ ಗೆಲುವು ಸಾಧಿಸಿದ್ದಾರೆ. ಬಾಣಸಂದ್ರ ರಮೇಶ್ ವಿಚಾರಕ್ಕೂ ನನಗೂ ಸಂಬಂಧವಿಲ್ಲದಿದ್ದರೂ ವಿನಾಕಾರಣ ನನ್ನ ಹೆಸರನ್ನು ಥಳುಕು ಹಾಕುವ ಮೂಲಕ ಕುತಂತ್ರದ ರಾಜಕಾರಣ ಮಾಡಿದರು ಎಂದು ಕಿಡಿಕಾರಿದರು.
ನಾನು ಶಾಸಕನಾಗಿದ್ದ ವೇಳೆಯ ಮೊದಲ ಇನ್ನಿಂಗ್ಸ್ ಮುಕ್ತಾಾಯಗೊಂಡಿದೆ. ಅಧಿಕಾರವಿದೆ ಎಂದು ಎಂ.ಟಿ.ಕೃಷ್ಣಪ್ಪನ ಬಾಲಂಗೋಚಿಗಳು ನಮ್ಮ ಕಾರ್ಯಕರ್ತರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ. ನನ್ನ ರಾಜಕಾರಣದ ಸೆಕೆಂಡ್ ಇನ್ನಿಂಗ್ಸ್ ಶುರುವಾಗಲಿದೆ ಎಂದು ಪರೋಕ್ಷವಾಗಿ ಎಂ.ಟಿ.ಕೃಷ್ಣಪ್ಪನವರ ಪಾಳೆಯಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ವಸಾಲಜಯರಾಮ್ ಅವರನ್ನು ಫಾರ್ಮ್ ಹೌಸ್ ಬಳಿಯಿಂದ ಪಟ್ಣಣದವರೆಗೂ ಬೈಕ್ ರ್ಯಾಲಿ ಮೂಲಕ ಕರೆ ತಂದರು. ರ್ಯಾಲಿಯುದ್ದಕ್ಕೂ ಕಾರ್ಯಕರ್ತರು ಮಸಾಲ ಜಯರಾಮ್ ಪರ ಘೋಷಣೆ ಮೊಳಗಿಸಿದರು. ಪಟ್ಟಣದಲ್ಲಿ ಸಂಖ್ಯಾಬಲ ಪ್ರದರ್ಶಿಸಿ ಮಸಾಲ ಜಯರಾಮ್ ಅವರೊಂದಿಗೆ ನಾವುಗಳಿದ್ದೇವೆ ಎಂಬ ಸಂದೇಶ ರವಾನಿಸುವಲ್ಲಿ ಕಾರ್ಯಕರ್ತರು ಯಶಸ್ವಿಯಾದರು.

ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ, ಬಿಜೆಪಿ ಜಿಲ್ಲಾ ಘಟಕದ ಕೆಂಪೇಗೌಡ, ಪಪಂ ಅಧ್ಯಕ್ಷ ಪ್ರಭಾಕರ್, ಸದಸ್ಯ ಆಂಜನಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಉಗ್ರಯ್ಯ, ತಾಪಂ ಮಾಜಿ ಉಪಾದ್ಯಕ್ಷ ಮಹಾಲಿಂಗಯ್ಯ, ಮುಖಂಡರಾದ ವಿ.ಟಿ.ವೆಂಕಟರಾಮ್, ಅರಳೀಕೆರೆ ಶಿವಯ್ಯ, ಕಡೇಹಳ್ಳಿ ಸಿದ್ದೇಗೌಡ, ಡಿ.ಆರ್.ಬಸವರಾಜು, ಕಾಳಂಜೀಹಳ್ಳಿ ಸೋಮಣ್ಣ, ಪೀಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ಗೊಟ್ಟಿಕೆರೆ ಕಾಂತರಾಜ್, ಪ್ರಕಾಶ್ ಯಾದವ್, ಬುಗುಡನಹಳ್ಳಿ ಕೃಷ್ಣಮೂರ್ತಿ ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಇದ್ದರು.

Get real time updates directly on you device, subscribe now.

Comments are closed.

error: Content is protected !!