ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರಕೆ: ಮಹಿಳೆಯರ ಆಕ್ರೋಶ

244

Get real time updates directly on you device, subscribe now.


ತುಮಕೂರು: ಬಡವರ ಹಸಿವು ನೀಗಿಸುವ ಸಲುವಾಗಿ ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಅಕ್ಕಿ ನೀಡುತ್ತಿದೆ. ಆದರೆ ಈ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರಿಗೆ ನೀಡುತ್ತಿರುವ ಅಕ್ಕಿ ಕಳಪೆಯಿಂದ ಕೂಡಿದ್ದು, ಪ್ಲಾಸ್ಟಿಕ್ ಅಕ್ಕಿ ಮಿಶ್ರಿತವಾಗಿದೆ. ಇದನ್ನು ಹೇಗೆ ಅನ್ನ ಮಾಡಿ ಸೇವಿಸುವುದು ಎಂದು ಫಲಾನುಭವಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ವಿದ್ಯಾನಗರದಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪಡೆದಿರುವ ಪಡಿತರ ಅಕ್ಕಿಯನ್ನು ಮಹಿಳೆಯರು ಸ್ವಚ್ಛ ಮಾಡುತ್ತಿದ್ದಾಗ ಪ್ಲಾಸ್ಟಿಕ್ ಅಕ್ಕಿ ಕಂಡು ಬಂದಿದೆ. ಈ ಪ್ಲಾಸ್ಟಿಕ್ ಅಕ್ಕಿ ನೋಡುತ್ತಿದ್ದಂತೆ ಮಹಿಳೆಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿ, ಇಂತಹ ಕಳಪೆ ಗುಣಮಟ್ಟದ ಅಕ್ಕಿಯನ್ನು ಏಕೆ ನೀಡುತ್ತಾರೆ. ಬಡವರು ಎಂದರೆ ಅಷ್ಟೊಂದು ಅಸಡ್ಡೆಯೇ ಎಂದು ಪ್ರಶ್ನಿಸಿದ್ದಾರೆ.

ಈ ರೀತಿಯ ಅಕ್ಕಿಯನ್ನು ಏಕೆ ಕೊಡುತ್ತಾರೆ. ವೋಟು ಹಾಕಿಸಿಕೊಳ್ಳಲು ಮಾತ್ರ ಮನೆ ಬಾಗಿಲಿಗೆ ಅಲೆಯುವ ಜನಪ್ರತಿನಿಧಿಗಳು ಇಂತಹ ಕಳಪೆ ಅಕ್ಕಿಯನ್ನು ಏಕೆ ಕೊಡುತ್ತಾರೆ. ಅವರಿಗೆ ಕಿಂಚಿತ್ತಾದರೂ ಮಾನವೀಯತೆ ಇಲ್ಲವೇ ಎಂದು ಮಹಿಳೆಯರು ಕಿಡಿಕಾರಿದ್ದಾರೆ.

ಇನ್ನೊಮ್ಮೆ ಜನಪ್ರತಿನಿಧಿಗಳು ವೋಟು ಕೇಳಲು ಮನೆ ಬಾಗಲಿಗೆ ಬರಲಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಇನ್ನು ಅಧಿಕಾರಿಗಳು ಕಳಪೆ ಅಕ್ಕಿ ಹಾಗೂ ಪ್ಲಾಸ್ಟಿಕ್ ಅಕ್ಕಿ ಹೇಗೆ ಎಲ್ಲಿ ಬೆರೆಸಲಾಗುತ್ತೆ ಎಂಬುದನ್ನು ಪತ್ತೆ ಹಚ್ಚುವ ಗೋಜಿಗೆ ಹೋಗುವುದಿಲ್ಲ. ತೂಕ ಹೆಚ್ಚಿಸಲು ಈ ರೀತಿ ಮಾಡುವುದು ಯಾವ ನ್ಯಾಯ ಎಂದು ಆಕ್ರೋಶ ಹೊರ ಹಾಕಿದರು.

ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಬಡವರಿಗೆ ಗುಣಮಟ್ಟದ ಪಡಿತರ ನೀಡಬೇಕು. ಕಳಪೆ, ಪ್ಲಾಸ್ಟಿಕ್ ಅಕ್ಕಿ ಬೆರೆಸುವುದು ತಪ್ಪಿಸಬೇಕು. ಪ್ಲಾಸ್ಟಿಕ್ ಅಕ್ಕಿ ತಿಂದು ಬಡವರು ಸಾಯುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!