ವಿಶೇಷ ಚೇತನರಿಗೆ ವರದಾನವಾದ ನರೇಗಾ

252

Get real time updates directly on you device, subscribe now.


ಗುಬ್ಬಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ವಿಶೇಷ ಚೇತನರಿಗೆ ಆಯಾ ಗ್ರಾಮಗಳಲ್ಲೇ ಉದ್ಯೋಗ ನೀಡಲಾಗುತ್ತಿದ್ದು, ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಪೂರ್ತಿ ಕೂಲಿ ದಿನಕ್ಕೆ ರೂ. 316 ನೀಡಲಾಗುತ್ತಿದೆ ಎಂದು ತಾಲ್ಲೂಕು ಐಇಸಿ ಸಂಯೋಜಕ ರಾಘವೇಂದ್ರ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಕ್ಷರತಾ ವಿಭಾಗದಲ್ಲಿ ಶುಕ್ರವಾರ ವಿಶೇಷ ಚೇತನರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ವಿಶೇಷ ಚೇತನರಿಗೆ ಅವರ ಸಾಮರ್ಥ್ಯ ಆಧರಿಸಿ ಕೆಲಸ ನೀಡಲಾಗುವುದು. ವರ್ಷವೊಂದಕ್ಕೆ 100 ದಿನಗಳ ವರೆಗೆ ಕೆಲಸ ನೀಡಲಾಗುವುದು. ನರೇಗಾ ಯೋಜನೆಯಡಿ ನೀಡಲಾಗುತ್ತಿರುವ ಈ ಸೌಲಭ್ಯವನ್ನು ತಾಲ್ಲೂಕಿನ ಎಲ್ಲಾ ವಿಶೇಷ ಚೇತನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿವಾರು ಎಲ್ಲಾ ವಿಶೇಷ ಚೇತನರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಇವರಲ್ಲಿ ಅರ್ಹರಾದವರನ್ನು ಗುರುತಿಸಿ ಉದ್ಯೋಗ ಚೀಟಿ ಕೊಡಿಸಿ ಕೆಲಸ ದೊರಕುವಂತೆ ನೋಡಿಕೊಳ್ಳಲಾಗುವುದು. ವಿಶೇಷ ಚೇತನರನ್ನು ಗುರುತಿಸಲು ಎಲ್ಲಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್ಡಬ್ಲ್ಯೂ) ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ಎಂಆರ್ ಡಬ್ಲ್ಯೂ ಶಿವಗಂಗಮ್ಮ, ಗುಬ್ಬಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ವಿಆರ್ ಡಬ್ಲ್ಯೂ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!