ತುರುವೇಕೆರೆ: ತಾಲೂಕಿನ ನಂದಿಕಲ್ಕೆರೆಯಲ್ಲಿ ಹಾಡಹಗಲಲ್ಲೇ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು 80 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ನಂದಿ ಕಲ್ಕೆರೆಯ ಗಂಗಮ್ಮ ಎಂಬುವವರು ಬೆಳಗ್ಗೆ ತಮ್ಮ ತೋಟಕ್ಕೆ ಎಮ್ಮೆ ಮೇಯಿಸಲು ತೆರಳಿದ್ದರು. ಅವರ ಪತಿ ನಿತ್ಯದ ಬದುಕಿಗಾಗಿ ಹೊರಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮನೆಯ ಬೀರಿನಲ್ಲಿದ್ದ 4 ಉಂಗುರ, ಮೂರು ಜೊತೆ ಜುಮುಕಿ, ಮಕ್ಕಳ ಓಲೆ ಜುಮುಕಿ, ಬಂಗಾರ ಸರ, 2 ನೆಕ್ಲೇಸ್ ಸೇರಿದಂತೆ ಸುಮಾರು 80 ಗ್ರಾಂ ನಷ್ಟು ಚಿನ್ನಾಭರಣ ದೋಚಿದ್ದಾರೆಂದು ಮನೆಯ ಒಡತಿ ಗಂಗಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Comments are closed.