ಕೊರಟಗೆರೆ ಕ್ಷೇತ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧ

158

Get real time updates directly on you device, subscribe now.


ಕೊರಟಗೆರೆ: ಪ್ರವಾಸಿ ಕ್ಷೇತ್ರ ಮತ್ತು ಶ್ರೀಮಠಗಳ ಅಭಿವೃದ್ಧಿಗೆ ನನ್ನ ಸಹಕಾರ ಇದ್ದೇಇರುತ್ತೆ, ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಅಂಕಿ ಅಂಶದ ರೂಪುರೇಷೆ ಸಿದ್ಧವಾಗಿದೆ. ಮುಂದಿನ 5 ವರ್ಷದ ಅವಧಿಯಲ್ಲಿ ಕೊರಟಗೆರೆಯ ಸಮಗ್ರ ಅಭಿವೃದ್ಧಿಯ ಪಥದತ್ತಾ ಸಾಗಲಿದೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ 5 ಗ್ಯಾರಂಟಿಯು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾರಿಗೆ ಬರಲಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.

ಕೊರಟಗೆರೆ ತಾಲೂಕು ಚನ್ನರಾಯನ ದುರ್ಗ ಹೋಬಳಿ ಬೂದಗವಿ ಗ್ರಾಪಂ ಕೇಂದ್ರ ಸ್ಥಾನದ ಸಿದ್ದರಬೆಟ್ಟ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠಕ್ಕೆ ಮಂಗಳವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿ, ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರವಾಸೋದ್ಯಮ, ಅರಣ್ಯ, ತೋಟಗಾರಿಕೆ ಇಲಾಖೆಯ ಸಹಯೋಗದಿಂದ ಅಭಿವೃದ್ಧಿ ಆಗಲಿವೆ. ಸಿದ್ದರಬೆಟ್ಟ ಶ್ರೀಕ್ಷೇತ್ರ ಸೇರಿದಂತೆ ಗೊರವನಹಳ್ಳಿಯ ಶ್ರೀಮಹಾಲಕ್ಷ್ಮಿ ದೇವಾಲಯ, ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ ದೇವಾಲಯ ಮತ್ತು ಚನ್ನರಾಯನ ದುರ್ಗ ಏಳುಸುತ್ತಿನ ಕೋಟೆಯ ಅಭಿವೃದ್ಧಿಗೆ ವಿಶೇಷ ಅನುದಾನ ತರುತ್ತೇನೆ ಎಂದು ತಿಳಿಸಿದರು.

ತುಮಕುರು ಜಿಲ್ಲೆಯಲ್ಲಿಕಾರ್ಯ ನಿರ್ವಹಣೆ ಮಾಡುತ್ತಿರುವ ಖಾಸಗಿ ಕಂಪನಿಗಳು ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕಿದೆ. ಉದ್ಯೋಗ ನೀಡುವಲ್ಲಿ ತಾರತಮ್ಮ ಮಾಡಿದರೆ ಅಂತಹ ಕಂಪನಿಗಳ ಲೈಸನ್ಸ್ ಮುಲಾಜಿಲ್ಲದೆ ರದ್ದು ಮಾಡುತ್ತೇವೆ. ಈಗಾಗಲೇ ಖಾಸಗಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಸಾಕಷ್ಟು ದೂರು ಬಂದಿವೆ. ನಮ್ಮ ಸರಕಾರ ನಿರುದ್ಯೋಗ ಸಮಸ್ಯೆ ಗಂಭೀರವಾಗಿ ಪರಿಗಣಿಸಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.
ನನ್ನ ಕೊರಟಗೆರೆ ಕ್ಷೇತ್ರದ ಸ್ವಾಮೀಜಿಗಳಿಗೆ ನಾನು ವಿಜಯದ ಕೃತಜ್ಞತೆ ಸಲ್ಲಿಸಿದ್ದೇನೆ. ವಿಧಾನಸಭಾ ಅಧಿವೇಶನ ಮುಗಿದ ತಕ್ಷಣವೇ ನನ್ನ ಕ್ಷೇತ್ರದ 36 ಗ್ರಾಪಂಗಳಿಗೆ ಭೇಟಿ ನೀಡಿ ವಿಜಯೋತ್ಸವ ಆಚರಣೆ ಮಾಡ್ತೇನೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ ಈಡೇರಿಕೆ ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಸಿದ್ದರಬೆಟ್ಟ ಶ್ರೀಮಠದ ಪೀಠಾಧ್ಯಕ್ಷ ವೀರಭದ್ರಶಿವಚಾರ್ಯ ಸ್ವಾಮೀಜಿ ಮಾತನಾಡಿ, ಡಾ.ಜಿ.ಪರಮೇಶ್ವರ ಸಿದ್ದರಬೆಟ್ಟದ ಅಭಿವೃದ್ಧಿಗೆ 50 ಲಕ್ಷ ಮತ್ತು ಶ್ರೀಮಠದ ಅಭಿವೃದ್ಧಿಗೆ ಈಗಾಗಲೇ 30 ಲಕ್ಷ ಅನುದಾನ ನೀಡಿದ್ದಾರೆ. ಪ್ರವಾಸಿ ಮತ್ತು ಪುಣ್ಯಕ್ಷೇತ್ರ ಅಭಿವೃದ್ಧಿಗೆ ಸಚಿವರು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಧಾರ್ಮಿಕ ಕೇಂದ್ರ ಮತ್ತು ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಸಹಕಾರ ಅಗತ್ಯ, ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಮತ್ತು ಸಚಿವರ ಜೊತೆ ಅಧಿಕಾರಗಳ ಪಾತ್ರವು ಬಹುಮುಖ್ಯ ಎಂದರು.
ಈ ವೇಳೆ ಕೊರಟಗೆರೆ ಉಸ್ತುವಾರಿ ಕೇಶವ ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಯುವಧ್ಯಕ್ಷ ವಿನಯ್, ಮಾಜಿ ತಾಪಂ ಸದಸ್ಯಅರವಿಂದ್, ಮುಖಂಡರಾದ ರೇಣುಕಾ ಪ್ರಸನ್ನ, ಶೇಖರ್, ವೀರಣ್ಣಗೌಡ, ಜೆಟ್ಟಿನಾಗರಾಜ್, ಸಿದ್ದಗಂಗಪ್ಪ, ಮಹೇಶ್, ಚಂದ್ರಶೇಖರ್, ಅರವಿಂದ್, ಪಟ್ಟನರಸಪ್ಪ, ರಮೇಶ್, ಕೃಷ್ಣಪ್ಪ, ಸೋಮಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!