ತುಮಕೂರು: ಫೇಸ್ ಬುಕ್ ನಲ್ಲಿ ಪರಿಚಿತನಾದವನ ಬಳಿ ಗಿಪ್ಟ್ ಕಳುಹಿಸುವ ಆಸೆಗೆ ಬಿದ್ದು 10 ಲಕ್ಷ ಪಂಗನಾಮ ಹಾಕಿಸಿಕೊಂಡಿರುವ ಸಂಬಂಧ ತುಮಕೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ ನಲ್ಲಿ ಪರಿಚಿತವಾದ ಅಪರಿಚಿತ ವ್ಯಕ್ತಿ ವಾಟ್ಸಾಪ್ ಮೂಲಕ ಮೇಸೆಜ್ ಮಾಡುತ್ತಿದ್ದು, ಅದಕ್ಕೆ ಸ್ಪಂದಿಸಿದ ತುಮಕೂರಿನ ಮಹಿಳೆಗೆ ದುಬಾರಿ ಬೆಲೆ ಗಿಪ್ಟ್ ಕೊರಿಯರ್ ಮಾಡಿರುವುದಾಗಿ, ಕೊರಿಯರ್ ನ ಮುದ್ರಣ ಪ್ರತಿ ಕಳುಹಿಸಿದ್ದಾನೆ.
ಅಪರಿಚಿತ ನೀಡಿದ ದುಬಾರಿ ಗಿಪ್ಟ್ ಪಡೆದುಕೊಳ್ಳಲು ಕಸ್ಟಮ್ ಅಧಿಕಾರಿಗಳೊಂದಿಗೆ ಸಂಪರ್ಕ ಪಡೆಯಲು ಹೇಳಿದ್ದಾನೆ. ಅದರಂತೆ ಮಹಿಳೆಯ ಮೊಬೈಲ್ ನಂಬರ್ಗೆ ಕರೆ ಮಾಡಿ ನಿಮಗೆ ಬಂದಿರುವ ಗಿಪ್ಟ್ ಪಡೆಯಲು ಕಸ್ಟಮ್ ಹಣ ಕಟ್ಟುವಂತೆ ಹೇಳಿದ್ದಾರೆ. ದುಬಾರಿ ಗಿಪ್ಟ್ ಆಸೆಗೆ ಬಿದ್ದ ಮಹಿಳೆ ಹಂತ ಹಂತವಾಗಿ ಒಟ್ಟು 10,99,900 ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಾಕಿದ್ದಾರೆ.
10 ಲಕ್ಷಕ್ಕೂ ಅಧಿಕ ಮೊತ್ತ ಪಾವತಿಸಿದರೂ ಸಹ ಅಪರಿಚಿತನ ದುಬಾರಿ ಗಿಪ್ಟ್ ಬರದೆ ಇದ್ದಾಗ ಅನುಮಾನಗೊಂಡ ಶಾಂತಿನಗರದ ಮಹಿಳೆ ತುಮಕೂರು ಸೈಬರ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಇಂತಹ ಅಪರಿಚಿತ ಗಿಪ್ಟ್ ಹಾಗೂ ಶೀಘ್ರ ಹಣ ಮಾಡುವ ವಿಚಾರದ ಹಿಂದೆ ಮೋಸದ ಉದ್ದೇಶ ಇರುತ್ತದೆ ಎನ್ನುವುದನ್ನು ಅರಿಯದ ಮಹಿಳೆ ಹಣ ಕಳೆದುಕೊಂಡಿದ್ದಾಳೆ.
Comments are closed.