ಲಂಚದ ಆರೋಪ- ಸಹಾಯಕ ನಿರ್ದೇಶಕಿ ಅಮಾನತು

194

Get real time updates directly on you device, subscribe now.


ಕೊರಟಗೆರೆ: ಬಡ ರೈತರು ಮತ್ತು ಸಾರ್ವಜನಿಕರಿಂದ ಅಧಿಕಾರಿಗಳು ಲಂಚ ಪಡೆಯೋದನ್ನಾ ನಾವು ಕೇಳಿದ್ದೀವಿ, ನೋಡಿದ್ದೀವಿ. ಆದರೆ ಸರಕಾರಿ ಸಿಬ್ಬಂದಿಯ ಸಂಬಳ ನೀಡೋದಿಕ್ಕೆ ಲಂಚ ಕೇಳಿ ಸಿಕ್ಕಿಬಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಲೋಕಾಯುಕ್ತ ದೂರಿನಂತೆ ಕರ್ತವ್ಯಲೋಪ ಮತ್ತು ಭ್ರಷ್ಟಚಾರದ ದೂರಿನ ಅನ್ವಯ ಬೆಂಗಳೂರು ಆಯುಕ್ತರ ಆದೇಶದಂತೆ ಅಮಾನತು ಆಗಿರುವ ಅಧಿಕಾರಿ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ.ಜಿ.ಕೆ. ಕರ್ತವ್ಯಲೋಪ ಮತ್ತು ಭ್ರಷ್ಟಚಾರದ ದೂರಿನ ಅನ್ವಯ ಅಮಾನತು ಆದ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಕಂಪ್ಯೂಟರ್ ಆಪರೇಟರ್ (ಹೊರಗುತ್ತಿಗೆ) ನೌಕರನ ಪ್ರತಿ ತಿಂಗಳ ಸಂಬಳ ನೀಡಲು ಲಂಚದ ಹಣ ನೀಡುವಂತೆ ತಿಳಿಸಿದ ಹಿನ್ನಲೆಯಲ್ಲಿ ಆತ ತಕ್ಷಣವೇ ತುಮಕೂರು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಕಂಪ್ಯೂಟರ್ ಆಪರೇಟರ್ಗೆ 2-3 ತಿಂಗಳಿಗೊಮ್ಮೆ ಸಂಬಳ ಮಾಡುತ್ತಿದ್ದು ಸಂಬಳವಾದಾಗ ಸಹಾಯಕ ನಿರ್ದೇಶಕಿ ಉಮಾದೇವಿಗೆ ಪ್ರತಿ ತಿಂಗಳು 1500 ರೂ. ಲಂಚದ ಹಣ ನೀಡಬೇಕಿದೆ. ಪ್ರತಿ ತಿಂಗಳು ಗೈರು ಹಾಜರಿಯ ಸಂಬಳ 4500 ರೂ. ಹಾಗೂ ಜುಲೈ ತಿಂಗಳ ಗೈರು ಹಾಜರಿಯ 3 ಸಾವಿರ ಸೇರಿ ಒಟ್ಟು 7500 ಲಂಚದ ಹಣ ನೀಡುವಂತೆ ಸಹಾಯಕ ನಿರ್ದೇಶಕಿ ಬೇಡಿಕೆ ಇಟ್ಟು ಕೊನೆಗೆ 7 ಸಾವಿರ ನೀಡುವಂತೆ ಒತ್ತಾಯ ಮಾಡಿದ್ದಾರೆ ಎಂದು ನೌಕರ ಬಾಲಾಜಿ ಎಂಬಾತ 2022ರ ಡಿ.30 ರಂದು ತುಮಕೂರು ಲೋಕಾಯುಕ್ತ ಕಚೇರಿಗೆ ಕಾನೂನು ಕ್ರಮಕ್ಕಾಗಿ ದೂರು ದಾಖಲಿಸಿದ್ದಾನೆ.

ನೌಕರ ಬಾಲಜಿಯ ದೂರಿನ ಅನ್ವಯ 2022ನೇ ಡಿ.30 ರಂದೇ ಲೋಕಾಯುಕ್ತ ಠಾಣೆಯಲ್ಲಿ ಸಹಾಯಕ ನಿರ್ದೇಶಕಿ ಉಮಾದೇವಿ ವಿರುದ್ಧ ಪ್ರಕರಣ ದಾಖಲಾಗಿದೆ. 2023ರ ಮಾ.3 ರಂದು ಆರೋಪಿಯು ನ್ಯಾಯಾಲಯದಿಂದ ಜಾಮೀನಿನ ಮೇಲೆ ಲೋಕಾಯುಕ್ತ ಠಾಣೆಯ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಲಂಚದ ಹಣಕ್ಕೆ ಅಪೇಕ್ಷೆ ಪಟ್ಟು ಕರ್ನಾಟಕ ನಾಗರಿಕ ಸೇವಾ ನಿಮಯ 2021ರ 3ನ್ನು ಉಲ್ಲಂಸಿರುತ್ತಾರೆ ಎಂದು ಪ್ರಸ್ತಾಪ ಮಾಡಲಾಗಿದೆ. ನಂತರ ಕೊರಟಗೆರೆಯ ಸಮಾಜ ಕಲ್ಯಾಣ ಇಲಾಖೆಗೆ ಹಾಜರಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ.

ಕೊರಟಗೆರೆ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ ವಿರುದ್ಧ ದಾಖಲಾಗಿರುವ ಕರ್ತವ್ಯಲೋಪ ಮತ್ತು ಭ್ರಷ್ಟಚಾರದ ದೂರಿನ ಅನ್ವಯ ಇಲಾಖೆಯ ವಿಚಾರಣೆ ಕಾಯ್ದಿರಿಸಿ ತಕ್ಷಣಕ್ಕೆ ಬರುವಂತೆ ಮೇ 5 ರಂದು ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ. ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಮೇಲಾಧಿಕಾರಿ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬೀಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರಭಾರಿ ಸಹಾಯಕ ನಿರ್ದೇಶಕರ ನೇಮಕ
ಕೊರಟಗೆರೆ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಉಮಾದೇವಿ ಅಮಾನತು ಆದ ಹಿನ್ನಲೆಯಲ್ಲಿ ತುಮಕೂರು ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ ಅವರು ಪಾವಗಡದ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರಿಗೆ ಕೊರಟಗೆರೆಯ ಪ್ರಭಾರ ಸಹಾಯಕ ನಿರ್ದೇಶಕನಾಗಿ ನೇಮಿಸಿ ಆದೇಶ ಮಾಡಿದ್ದಾರೆ.

ದೂರು ನೀಡಿ ತನ್ನ ಕೆಲಸವೇ ಬಿಟ್ಟ ನೌಕರ
ಕೊರಟಗೆರೆ ಸಮಾಜ ಕಲ್ಯಾಣ ಇಲಾಖೆಯ ಕಂಪ್ಯೂಟರ್ ಆಪರೇಟರ್ ಬಾಲಾಜಿ.ಕೆ.ಎಸ್ (ಹೊರಗುತ್ತಿಗೆ) ನೌಕರ ತನಗಾದ ಅನ್ಯಾಯ ವಿರುದ್ಧ ತುಮಕೂರು ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ ತಕ್ಷಣವೇ ಆತನ ಮೇಲೆ ರಾಜಕೀಯ ಮತ್ತು ವೈಯಕ್ತಿಕ ಕಿರುಕುಳ ಪ್ರಾರಂಭವಾಗಿವೆ. ಸಹಾಯಕ ನಿರ್ದೇಶಕಿ ಮೇಲೆ ಲಂಚದ ಹಣದ ಪ್ರಕರಣ ದಾಖಲಾದ್ರು ಜಾಮೀನಿನ ಮೇಲೆ ಮತ್ತೆ ಅದೇ ಸ್ಥಳಕ್ಕೆ ಆಗಮಿಸಿದ ಹಿನ್ನಲೆ ನೌಕರ ಕೆಲಸಕ್ಕೆ ಬರದೆ ಗೈರು ಆಗಿದ್ದು ಆತನ ಮೇಲೆ ಮತ್ತಷ್ಟು ರಾಜಕೀಯ ನಾಯಕರ ಒತ್ತಡದ ಪ್ರಭಾವ ಬೀರಿದೆ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!