ಗುಬ್ಬಿ ತಾಲ್ಲೂಕಲ್ಲಿ ವರುಣನ ಆರ್ಭಟ

236

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಹಲವು ಕಡೆ ಮಂಗಳವಾರ ರಾತ್ರಿ ಬೀಸಿದ ಮಳೆಗಾಳಿಗೆ ಮರಗಳು ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ರಭಸವಾದ ಗಾಳಿ ಬೀಸಿದ್ದರಿಂದ ಕೆ.ಮತ್ತಿಘಟ್ಟ ಗ್ರಾಮದ ಶಾಲೆಯ ಆವರಣದಲ್ಲಿದ್ದ ಮರ ಬಿದ್ದು ಶಾಲೆಯ ಆವರಣದ ಗೋಡೆ ಕುಸಿದಿದೆ. ಮತ್ತೊಂದು ಕಡೆ ಮರದ ಕೊಂಬೆಯು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಜನರು ತೊಂದರೆ ಅನುಭವಿಸಿದ್ದಾರೆ.

ಕಲ್ಲೂರ್ ಕ್ರಾಸ್ ಸುತ್ತಮುತ್ತ ರಸ್ತೆಯ ಬದಿಗಳಲ್ಲಿ ಸಾಕಷ್ಟು ಮರಗಳು ಮುರಿದು ಬಿದ್ದಿವೆ. ಬುಧವಾರ ಬೆಳಗ್ಗೆ ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ಸಿಬ್ಬಂದಿ ಮುರಿದು ಬಿದ್ದಿದ್ದ ಕೊಂಬೆಗಳನ್ನು ತೆರವುಗೊಳಿಸಿ ತುಂಡಾಗಿರುವ ವಿದ್ಯುತ್ ತಂತಿ ಸರಿಪಡಿಸಿ ವಿದ್ಯುತ್ ಸರಬರಾಜು ಮಾಡಲು ಕ್ರಮ ವಹಿಸಿದ್ದಾರೆ. ಮಂಗಳವಾರ ರಾತ್ರಿಯಿಂದಲೂ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೂ ಅಭಾವ ಎದುರಿಸುವಂತಾಗುತ್ತಿದೆ.

ಇದೀಗ ಮಳೆಗಾಲ ಪ್ರಾರಂಭ ಆಗಿರುವುದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ಅಧಿಕಾರಿಗಳು ಅಪಾಯದ ಅಂಚಿನಲ್ಲಿ ಇರುವ ಮರಗಳ ಕೊಂಬೆಗಳನ್ನು ಕಡಿದು ಸಾರ್ವಜನಿಕರ ಆತಂಕ ನಿವಾರಿಸಬೇಕು ಎಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯವಾಗಿದೆ.

Get real time updates directly on you device, subscribe now.

Comments are closed.

error: Content is protected !!