ವಿದ್ಯುತ್ ಶಾಕ್ ಗೆ ಹಸು ಸಾವು

219

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಕೊಡಗೀಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸೂಳೆಕೆರೆ ಬಳಿ ವಿದ್ಯುತ್ ಆಘಾತಕ್ಕೆ ಸಿಲುಕಿ ಹಸುವೊಂದು ಮೃತಪಟ್ಟಿದೆ.

ವಿದ್ಯುತ್ ಆಘಾತಕ್ಕೆ ಸಿಲುಕಿ ಮೃತಪಟ್ಟ ಹಸು ಸೂಳೆಕೆರೆ ಗ್ರಾಮದ ಶಾಂತಮ್ಮ ಎಂಬ ಮಹಿಳೆಗೆ ಸೇರಿದ್ದಾಗಿದೆ. ಎಂದಿನಂತೆ ಗ್ರಾಮ ಸಮೀಪದಲ್ಲಿ ಹಸು ಮೇಯಿಸಲು ಹೋಗಿದ್ದರು. ಹಸು ಹುಲ್ಲನ್ನು ಮೇಯುತ್ತಾ ಹತ್ತಿರದಲ್ಲೇ ಇದ್ದ ವಿದ್ಯುತ ಪರಿವರ್ತಕ ಅಳವಡಿಸಿದ್ದ ವಿದ್ಯುತ್ ಕಂಬದ ಬಳಿ ಹೋದ ವೇಳೆ ವಿದ್ಯುತ್ ಸ್ಪರ್ಶಕ್ಕೊಳಗಾಗಿ ಮೃತ ಪಟ್ಟಿದೆ. ಸುದ್ದಿ ತಿಳಿದ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಿದ್ದಾರೆ.

ಸೂಳೆಕೆರೆ ಗ್ರಾಮ ಮುಖಂಡ ಶಿವಣ್ಣ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ ಶಾಂತಮ್ಮ ಅವರ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಹಸು ಮೃತಪಟ್ಟ ಹಿನ್ನಲೆಯಲ್ಲಿ ಕುಟುಂಬ ಆಘಾತಗೊಂಡಿದೆ. ಹಸು ಕಳೆದುಕೊಂಡಿರುವ ಶಾಂತಮ್ಮ ಅವರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಬೆಸ್ಕಾಂ ಸುರಕ್ಷತೆಯತ್ತ ಚಿತ್ತ ಹರಿಸಿ ವಿದ್ಯುತ್ ಅಪಘಾತ ತಪ್ಪಿಸಬೇಕೆಂದು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!