ತುಮಕೂರು: ಪ್ರತಿ ದಿನ ನಾವು ಅನುಸರಿಸುವ ಗುಣಮಟ್ಟ ದಿನಚರಿಯಿಂದ ಸದೃಢ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು ಎಂದು ಆರೋಗ್ಯ ಭಾರತಿ ಅಧ್ಯಕ್ಷೆ ಡಾ.ರಾಜೇಶ್ವರಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕವು ಆರೋಗ್ಯ ಭಾರತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ತಿಳುವಳಿಕ ಸ್ಮರಣಿಕೆಯ ಆರೋಗ್ಯಕರ ಜೀವನ ಶೈಲಿ ಕುರಿತ ವಿಶೇಷ ಉಪನ್ಯಾಸ ಕ್ರಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ದೈಹಿಕವಾಗಿ ಸದೃಢರಾದರೆ ಆರೋಗ್ಯವಾಗಿರಲು ಸಾಧ್ಯವಿಲ್ಲ. ಮಾನಸಿಕವಾಗಿಯೂ ಸದೃಢರಾದಾಗ ಸಂಪೂರ್ಣ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಾಧ್ಯ ಎಂದರು.
ಮಾನಸಿಕವಾಗಿ ಆರೋಗ್ಯವಾಗಿರಲು ಯೋಗ, ಮೆಡಿಟೇಷನ್ ಗಳಿಂದ ಸಾಧ್ಯ, ದಿನದ ಆರಂಭವನ್ನುಉತ್ತಮ ಹವ್ಯಾಸ ಅನುಸರಿಸುವುದರ ಮೂಲಕ ಪ್ರಾರಂಭಿಸಬೇಕು. ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ದಕ್ಷಿಣ ಪ್ರಾಂತ ಆರೋಗ್ಯ ಭಾರತಿ ಕಾರ್ಯದರ್ಶಿ ರಾಘವೇಂದ್ರ ರಾವ್ ಮಾತನಾಡಿ, ಆರೋಗ್ಯ ಭಾರತಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆ ಜನರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಮಕ್ಕಳಿಗೆ ಆರೋಗ್ಯದ ಬಗ್ಗೆ ಶಾಲಾ ದಿನಗಳಲ್ಲಿಯೇ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತುಮಕೂರು ಜಿಲ್ಲಾ ಆರೋಗ್ಯ ಭಾರತಿಯ ಅಂತಾರಾಷ್ಟ್ರೀಯ ಯೋಗ ಶಿಕ್ಷಕ ನಾಗರಾಜ್ ಮಾತನಾಡಿ, ಆರೋಗ್ಯವಾದ ಜೀವನವನ್ನು ನಾವೆಲ್ಲರೂ ವೃದ್ಧಿಸಿಕೊಳ್ಳಬೇಕು. ಯುವ ಜನತೆ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಯೋಗ ಮಾಡುವುದರ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನುಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್.ಎಂ.ಶೇಠ್, ತುಮಕೂರು ವಿವಿ ಯುವ ರೆಡ್ ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ.ಪೂರ್ಣಿಮಾ.ಡಿ, ತುಮಕೂರು ಆರೋಗ್ಯ ಭಾರತಿ ವಿಭಾಗದ ಸಂಯೋಜಕ ವೈದ್ಯ ಅರವಿಂದ್, ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪರಿಮಳ, ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಹೊಸಮನಿ ಭಾಗವಹಿಸಿದ್ದರು.
Comments are closed.