ತುಮಕೂರು: ಪ್ರಸಕ್ತ 2023 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿಗೆ ಕಾರಣಗಳು ಏನು ಮತ್ತು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಹೇಗೆ ಕಾರ್ಯಕ್ರಮ ರೂಪಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ನವೀನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಸೋಲಿನ ಕಾರಣ ಮತ್ತು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ಕಾರ್ಯಕರ್ತರು ಸಂಘಟಿತರಾಗಿ ಮುಂಬರು ಚುನಾವಣೆಯಲ್ಲಿ ಸಕ್ರಿಯರಾಗಬೇಕು ಎಂದರು.
ಮತದಾರರು ಗ್ಯಾರಂಟಿ ಕಾರ್ಡ್ಗಳಿಗೆ ಮನ ಸೋತಿದ್ದಾರೆ. ಕಾಂಗ್ರೆಸ್ ಪಕ್ಷದವರು ಮನೆ ಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸುವುದರಲ್ಲಿ ಯಶಸ್ವಿಯಾಗಿದೆ ನಾವು ಕೋವಿಡ್ ಮತ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮುಂದಿಟ್ಟು ಮತ ಕೇಳಿದ್ದೆವು ಆದರೆ ಜನ ಕಾಂಗ್ರೆಸ್ ನೀಡಿದ್ದ ಸುಳ್ಳಿನ ಗ್ಯಾರಂಟಿಗಳ ಕಡೆ ಒಲವು ತೋರಿದ್ದಾರೆ. ಇದು ವಾಸ್ತವಕ್ಕಿಂತ ದೂರದ ಮಾತಾಗಿದೆ ಜನರಿಗೆ ಮುಂದಿನ ದಿನಗಳಲ್ಲಿ ಈ ಕುರಿತ ಅರಿವಾಗುತ್ತದೆ ಎಂದರು.
ಇತ್ತೀಚಿಗೆ ಮುಖ್ಯಮಂತ್ರಿಗಳು ನಮ್ಮ ಸರ್ಕಾರದಲ್ಲಿ ಮಾಡಿರುವ ಜೊತೆಗೆ ಹಾಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳಿಗೆ ತಡೆ ಹಿಡಿದಿದ್ದಾರೆ ಇದು ಎಷ್ಟು ಮಾತ್ರ ಸರಿ ಎಂದರು ಇದರಿಂದ ಜನರಿಗೆ ಸಾಕಷ್ಟು ತೊಂದರೆಗಳು ಆಗುತ್ತವೆ ಎಂಬುದು ಅವರಿಗೆ ಅರಿವು ಆಗಲಿಲ್ಲವೇ ಎಂದರು.
ಇನ್ನು ನಮ್ಮ ಸರ್ಕಾರ 40% ಸರ್ಕಾರ ಎಂದು ಬಿಂಬಿಸಿದ್ದರು. ಆದರೆ ಅದಕ್ಕೆ ಯಾವುದೇ ರೀತಿಯಾದ ಸ್ಪಷ್ಟ ಉದಾಹರಣೆ ನೀಡದೆ ವೃಥಾ ಸುಳ್ಳು ಆರೋಪ ಮಾಡಿ ನಮ್ಮ ಪಕ್ಷದ ಮೇಲೆ ದ್ವೇಷ ರಾಜಕಾರಣ ಮಾಡಲು ಹೊರಟಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ ಇತ್ತೀಚಿಗೆ ನಮ್ಮ ಕಾರ್ಯಕರ್ತರು ಪ್ರವೀಣ್ ನೆಟ್ಟಾರು ವಿಧಿವಶ ಆದ ಮೇಲೆ ಅವರ ಕುಟುಂಬದವರಿಗೆ ಅಂದರೆ ಅವರ ಪತ್ನಿಗೆ ಸರ್ಕಾರಿ ಕೆಲಸ ಕೊಟ್ಟಿದ್ದೆವು ಆದರೆ ಆ ಕೆಲಸವನ್ನು ಹಾಲಿ ಸರ್ಕಾರ ಹಿಂಪಡೆದು ದ್ವೇಷ ರಾಜಕಾರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಮೊದಲು ನೀವೇ ಹೇಳಿರುವ ಉಚಿತ ಗ್ಯಾರಂಟಿಗಳನ್ನು ಜಾರಿಗೆ ತನ್ನಿ ಆಮೇಲೆ ದ್ವೇಷದ ರಾಜಕಾರಣ ಮಾಡಿರಂತೆ ಎಂದರು ಜೊತೆಗೆ ಚುನಾವಣೆ ಸಮಯದಲ್ಲಿ ಎಲ್ಲಾ ಕಡೆ ವೇದಿಕೆಗಳಲ್ಲಿ ಎಲ್ಲರಿಗೂ ಉಚಿತ ಮತ್ತು ಖಚಿತ ಎಂದು ಹೇಳುತ್ತಿದ್ದರು ಆದರೆ ಇವಾಗ ಕೆಲವೊಂದು ನಿಬಂದನೆಗಳನ್ನು ಹೇರಲು ಹೊರಟ್ಟಿದ್ದಾರೆ ಎಂದು ಹೇಳಿದರು.
Comments are closed.