ಕುಣಿಗಲ್: 70 ವರ್ಷದ ವಯೋವೃದ್ದೆಯ ಮೇಲೆ ಸಂಬಂಧಿಯ ಸ್ನೇಹಿತರೆ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲಿಸ್ ಠಾಣೆಯಲ್ಲಿ ವೃದ್ದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಕೆಂಪಮ್ಮ (ಹೆಸರುಬದಲಿಸಿದೆ) ಎಂಬ ವೃದ್ದೆ ಮೇ-26ರಂದು ನೀಡಿದ ದೂರಿನಲ್ಲಿ, ಈಕೆ ತಾಲೂಕಿನ ಕಸಬಾ ಹೋಬಳಿಯ ಗ್ರಾಮ ಒಂದರಲ್ಲಿ ಮಗಳು, ಅಳಿಯನೊಂದಿಗೆ ವಾಸವಾಗಿದ್ದು, ಮೆ 21. ಭಾನುವಾರದಂದು ಮಗಳು ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದು, ಕೆಂಪಮ್ಮ ಒಬ್ಬರೆ ಮನೆಯಲ್ಲಿದ್ದರು.
ಅದೆ ದಿನ ರಾತ್ರಿ ಕೆಂಪಮ್ಮನ ಅಳಿಯನ ಜೊತೆ ರಾತ್ರಿ ಊಟಕ್ಕೆ ಇಬ್ಬರು ಸ್ನೇಹಿತರಾದ ಮಂಜುನಾಥ, ರಾಜೇಶ ಊಟಕ್ಕೆ ಬಂದಿದ್ದು, ಊಟ ಮಾಡುವ ಮುನ್ನ ಅವರು ಕೆಂಪಮ್ಮನ ಅಳಿಯನಿಗೆ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪಿಸಿ, ಏಕಾಏಕಿ ವೃದ್ಧ್ದೆ ಕೆಂಪಮ್ಮನ ಮೇಲೆ ಎರಗಿ ಅತ್ಯಚಾರ ಮಾಡಿದ್ದಲ್ಲದೆ ಜಾತಿನಿಂದನೆ ಮಾಡಿ ವಿಷಯ ಯಾರಿಗೂ ತಿಳಿಸಬಾರದೆಂದು ಹೇಳಿ ಪರಾರಿಯಾಗಿದ್ದಾರೆ. ಬೆಳಗ್ಗೆ ಅಳಿಯ ಕೆಲಸಕ್ಕೆ ಹೋಗಿದ್ದು, ವೃದ್ಧೆ ಎಷ್ಟು ಹೊತ್ತಾದರು ಮನೆಯಿಂದ ಹೊರಬಾರದೆ ಇರುವುದನ್ನು ಗಮನಿಸಿದ ನೆರೆಹೊರೆಯವರು ಬಂದು, ವೃದ್ದೆಯನ್ನು ವಿಚಾರಿಸಲಾಗಿ, ಅಕೆ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದು, ನಂತರ ಸಂಬಂಧಿಕರು, ನೆರೆಹೊರೆಯವರು ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಅನ್ಯಾಯ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕೆಂದು ದೂರಿದ್ದಾರೆ. ವೃದ್ದೆ ನೀಡಿದ ದೂರಿನ ಮೇರೆಗೆ ಪೊಲಿಸರು ಪ್ರಕರಣ ದಾಖಲಿಸಿ ಅರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ವೃದ್ಧೆ ಮೇಲೆ ಅತ್ಯಾಚಾರ: ದೂರು ದಾಖಲು
Get real time updates directly on you device, subscribe now.
Next Post
Comments are closed.