ಕೇಬಲ್ ಕಳವು- ನೀರು ಪೂರೈಕೆಯಲ್ಲಿ ವ್ಯತ್ಯಯ

78

Get real time updates directly on you device, subscribe now.


ಕುಣಿಗಲ್: ಕೊಳೆವೆಬಾವಿಗಳ ಕೇಬಲ್ ಕಳ್ಳರ ಹಾವಳಿಗೆ ಪುರಸಭೆಯ ವಿವಿಧ ವಾರ್ಡ್ಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಿ ನಾಗರೀಕರು ಪರದಾಡುವಂತಾಗಿದೆ.
ಪುರಸಭೆಯ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯ ಮೂಲಕ ದೊಡ್ಡಕೆರೆಯಿಂದ ನೀರು ಎತ್ತುವಳಿ ಮಾಡುತ್ತಿದ್ದರೂ ಸಮರ್ಪಕ ವಿತರಣೆ ಜಾಲ ಇಲ್ಲದೆ ಈಗಲೂ ಬಹುತೇಕ ವಾರ್ಡ್ಗಳಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ಪಟ್ಟಣದ 23ನೇ ವಾರ್ಡ್, ಕೋಟೆ ಪ್ರದೇಶದ 11, 14, 15 ಹಾಗೂ ದೊಡ್ಡಪೇಟೆಯ ವ್ಯಾಪ್ತಿಯಲ್ಲಿನ 3, 4, 7, 9ನೇ ವಾರ್ಡ್ಗಳಲ್ಲಿ ನಾಗರೀಕರ ಬಳಕೆಗೆ ಪುರಸಭೆವತಿಯಿಂದ ಕೊಳವೆ ಬಾವಿ ಕೊರೆಸಿ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದ್ದು, ಕಳೆದ ಕೆಲದಿನಗಳಲ್ಲಿ ಈ ವಾರ್ಡ್ಗಳಲ್ಲಿನ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ಕೇಬಲ್ ಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಕಾರಣ ನೀರು ಪೂರೈಕೆಯಾಗದ ನಾಗರೀಕರು ಪರದಾಡುವಂತಾಗಿದೆ. ಕೆಲ ಕೊಳವೆ ಬಾವಿಗಳಲ್ಲಿ ಅಳವಡಿಸಿದ ಕೆಲವ ದಿನದಲ್ಲಿ ಕಳವು ಮಾಡಲಾಗುತ್ತಿರುವುದರಿಂದ ಪುರಸಭೆ ನೀರು ಪೂರೈಕೆ ವಿಭಾಗದ ಸಿಬ್ಬಂದಿ ಹೈರಾಣಾಗಿದ್ದಾರೆ.
ಈ ಮಧ್ಯೆ ಪುರಸಭೆ ಮುಖ್ಯಾಧಿಕಾರಿಗಳು ಕುಣಿಗಲ್ ಪೊಲೀಸರಿಗೆ ಪತ್ರ ಬರೆದು ಪಟ್ಟಣದ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೇಬಲ್ ಕಳುವಿನಿಂದ ಅಗುತ್ತಿರುವ ಸಮಸ್ಯೆ ಬಗ್ಗೆ ಗಮನಸೆಳೆದು ಪಟ್ಟಣದ ವ್ಯಾಪ್ತಿಯಲ್ಲಿ ಗಸ್ಸು ನಿಯೋಜಿಸಿ ಕಳುವು ನಿಯಂತ್ರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!