ನೂತನ ಸಚಿವರ ಪ್ರಮಾಣ- ಖಾತೆ ಹಂಚಿಕೆ

ಸಿದ್ದುಗೆ ಹಣಕಾಸು, ಡಿಕೆಶಿಗೆ ಜಲಸಂಪನ್ಮೂಲ, ಪರಂಗೆ ಗೃಹ ಇಲಾಖೆ

90

Get real time updates directly on you device, subscribe now.


ಬೆಂಗಳೂರು: ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಹಣಕಾಸು, ವಾರ್ತೆ ಮತ್ತು ಗುಪ್ತಚರ ಇಲಾಖೆಯನ್ನು ಮುಖ್ಯಮಂತ್ರಿಯೇ ಇಟ್ಟುಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುರ್ಮಾರ್ ಅವರಿಗೆ ಮಹತ್ವದ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ದೊರೆತಿದೆ.

ಉಳಿದಂತೆ ಖಾತೆಗಳ ವಿವರ ಹೀಗಿದೆ:
ಡಾ.ಜಿ. ಪರಮೇಶ್ವರ್- ಗೃಹ ಖಾತೆ,
ಹೆಚ್.ಕೆ.ಪಾಟೀಲ್- ಸಣ್ಣ ನೀರಾವರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ
ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ
ಕೆ.ಜೆ.ಜಾರ್ಜ್ – ಇಂಧನ
ಎಂ.ಬಿ.ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಐಟಿ ಬಿಟಿ
ರಾಮಲಿಂಗಾರೆಡ್ಡಿ- ಸಾರಿಗೆ
ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ
ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಜಮೀರ್ ಅಹ್ಮದ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ
ಕೃಷ್ಣ ಬೈರೇಗೌಡ- ಕಂದಾಯ,
ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಚೆಲುವರಾಯ ಸ್ವಾಮಿ- ಕೃಷಿ
ಕೆ.ವೆಂಕಟೇಶ್ – ಪಶು ಸಂಗೋಪನಾ ಮತ್ತು ರೇಷ್ಮೆ
ಹೆಚ್.ಸಿ.ಮಹಾದೇವಪ್ಪ- ಸಮಾಜ ಕಲ್ಯಾಣ
ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ
ಕೆ.ಎನ್.ರಾಜಣ್ಣ- ಸಹಕಾರ
ಶರಣಬಸಪ್ಪ ದರ್ಶನ್ ಪುರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಮತ್ತು ಎಪಿಎಂಸಿ
ಆರ್.ಬಿ.ತಿಮ್ಮಾಪುರ್ – ಅಬಕಾರಿ-ಮುಜರಾಯಿ
ಎಸ್.ಎಸ್.ಮಲ್ಲಿಕಾರ್ಜುನ್ – ಗಣಿ ಮತ್ತು ಭೂವಿಜ್ಞಾನ
ಶಿವರಾಜ್ ತಂಗಡಗಿ- ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ
ಮಂಕಾಳ ವೈದ್ಯ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
ಲಕ್ಷ್ಮಿ ಹೆಬ್ಬಾಳಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ರಹೀಂಖಾನ್- ಪೌರಾಡಳಿತ ಮತ್ತು ಹಜ್
ಡಿ.ಸುಧಾಕರ್- ಮೂಲ ಸೌಕರ್ಯ ಅಭಿವೃದ್ಧಿ, ಯೋಜನಾ ಮತ್ತು ಸಾಂಖ್ಯಿಕ ಇಲಾಖೆ
ಸಂತೋಷ್ ಲಾಡ್- ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ
ಎನ್.ಎಸ್.ಬೋಸ್ ರಾಜ್- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
ಬೈರತಿ ಸುರೇಶ್ – ನಗರಾಭಿವೃದ್ಧಿ,
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಎಂ.ಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ
ಕೆ.ಎನ್.ರಾಜಣ್ಣ- ಸಹಕಾರ
ಶಿವಾನಂದ ಪಾಟೀಲ್- ಜವಳಿ, ಸಕ್ಕರೆ ಮತ್ತು ಎಪಿಎಂಸಿ
ಬಿ.ನಾಗೇಂದ್ರ- ಯುವಜನ ಸೇವೆ, ಕ್ರೀಡೆ ಮತ್ತು ಸಂಸ್ಕೃತಿ ಖಾತೆ

ಗ್ಯಾರಂಟಿ ಈಡೇರಿಸೋದು ಪಕ್ಕಾ!

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ತಿಂಗಳಿಗೆ ರೂ. 2 ಸಾವಿರ, ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ, ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ಯುವಕರಿಗೆ ರೂ.1,500 ಭತ್ಯೆ ಗ್ಯಾರಂಟಿ ಯೋಜನೆಗಳಾಗಿವೆ. ಮುಂದಿನ ಜೂನ್ ತಿಂಗಲ ಸಚಿವ ಸಂಪುಟ ಸಭೆಯಲ್ಲಿ ಐದು ಭರವಸೆಗಳ ಅನುಷ್ಠಾನಕ್ಕೆ ಚರ್ಚಿಸಿ ಅನುಮೋದನೆ ನೀಡಲಾಗುವುದು.
ಸಿದ್ಧರಾಮಯ್ಯ, ಮುಖ್ಯಮಂತ್ರಿ

ಅಸಮಾಧಾನ ಮಾಡಿಕೊಂಡರೆ ನಾನೇನು ಮಾಡಲಿ: ಡಿಕೆಶಿ
ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕೆಲವರು ಅಸಮಾಧಾನಗೊಂಡಿದ್ದಾರೆ. ಆದರೆ ಇದಕ್ಕೆ ನಾನೇನು ಮಾಡಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಾನೂ ಕೂಡ ಸಾಕಷ್ಟು ಬಾರಿ ಅವಕಾಶದಿಂದ ವಂಚಿತನಾಗಿದ್ದೆ. ಧರಂಸಿಂಗ್, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನನಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ ನಾನು ತಾಳ್ಮೆಯಿಂದ ಕಾದಿದ್ದೆ ಎಂದು ಹೇಳಿದರು.
ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಮಾಡಿಕೊಂಡರೆ ನಾನು ಏನು ಮಾಡಲು ಆಗುತ್ತೆ? ಮಾತನಾಡುವವರು ಮಾತನಾಡಲಿ, ನಾನೇನು ಮಾತನಾಡುವುದಿಲ್ಲ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!