ತುಮಕೂರು: ರೋಗಿಗಳಿಗೆ ದಾದಿಯರ ಮಾತೃತ್ವ, ಆತ್ಮಸ್ಥೈರ್ಯ ತುಂಬುವ ಮಾತುಗಳೇ ಪ್ರಥಮ ಚಿಕಿತ್ಸೆಯಾಗಿದ್ದು ರೋಗಿಗಳಿಗೆ ಚೈತನ್ಯ ತುಂಬಿ ಶೀಘ್ರ ಗುಣಮುಖರನ್ನಾಗಿಸುವ ಪ್ರಯತ್ನದಲ್ಲಿ ದಾದಿಯರ ಪಾತ್ರ ಪ್ರಮುಖವಾದದ್ದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ಸಿದ್ದಗಂಗಾ ಆಸ್ಪತ್ರೆಯ ವತಿಯಿಂದ ನಡೆದ ವಿಶ್ವ ದಾದಿಯರ ದಿನದ ಅಂಗವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗುಣಮುಖರಾದ ರೋಗಿಗಳಲ್ಲಿ ಬದುಕಿನ ಭರವಸೆ ಮೂಡಿಸುವುದು ದಾರಿಯರ ಕರ್ತವ್ಯವಾಗಿದೆ. ಕೆಲಸದ ಒತ್ತಡ ಎಷ್ಟೇ ಇದ್ದರೂ ರೋಗಿಗಳಿಗೆ ಹಸನ್ಮುಖರಾಗಿ ಚಿಕಿತ್ಸೆನೀಡಬೇಕು, ರೋಗಿಗಳಿಗೆ ವೈದ್ಯರ ಚಿಕಿತ್ಸೆ ಪರಿಣಾಮ ಬೀರಬೇಕೆಂದರೆ ದಾದಿಯರು ತಮ್ಮ ಜ್ಞಾನ ಹಾಗೂ ಅನುಭವ ಧಾರೆ ಎರೆಯಬೇಕು ಎಂದರು.
ಸಿದ್ಧಗಂಗಾ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮಾತನಾಡಿ ಯಾವುದೇ ಉದ್ಯೋಗ ನಮಗೆ ತೃಪ್ತಿ ನೀಡಬೇಕೆಂದರೆ ಅದರಲ್ಲಿ ಪರೋಪಕಾರಿ ಗುಣ ಹಾಗೂ ಸೇವಾ ಮನೋಭಾವ ಮುಖ್ಯವಾಗುತ್ತದೆ. ಸೇವೆ ಹಾಗೂ ವೃತ್ತಿ ಜೀವನ ಎರಡರಲ್ಲೂ ಜೀವನಕ್ಕೆ ಮೌಲ್ಯ ಕೊಡುವ ದಾರಿಯರ ಉದ್ಯೋಗ ಜೀವನ ಪ್ರಶಂಶನೀಯ ಎಂದರು.
Comments are closed.