ಕುಣಿಗಲ್: ಸೀಮೆ ಹಸು ಕರುಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಸ್ಕಾರ್ಪಿಯೋ ಕಾರು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಗಡಿಪಾಳ್ಯ ಕ್ರಾಸ್ ಬಳಿ, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ಉರುಳಿ ಬಿದ್ದ ಪರಿಣಾಮ ಕರು ಒಂದು ಮೃತಪಟ್ಟಿದ್ದು ಇತರೆ 22 ಕರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ಮಂಗಳವಾರ ಬೆಳಗಿನ ಜಾವ 2 ಗಂಟೆಯಲ್ಲಿ ಗಸ್ತಿನಲ್ಲಿದ್ದ ಅಮೃತೂರು ಪೋಲಿಸರಿಗೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು, ರಾಷ್ಟ್ರೀಯ ಹೆದ್ದಾರಿ 75ರ ಹೇಮಾವತಿ ಕ್ರಾಸ್ ಹಾಗೂ ಮಾಗಡಿಪಾಳ್ಯ ಗೇಟು ನಡುವೆ ಅಪಘಾತವಾಗಿದೆ ಎಂದು ಮಾಗಡಿಪಾಳ್ಯದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದು, ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಅಮೃತೂರು ಪೊಲೀಸರು ಪರಿಶೀಲಿಸಲಾಗಿ ಸ್ಕಾರ್ಪಿಯೋ ಕಾರಿನಲ್ಲಿ 22 ಸೀಮೆ ಹಸು ಕರುಗಳ ಕಾಲು, ಬಾಯಿ. ಕಟ್ಟಿ ಸಾಗಾಣೆ ಮಾಡುತ್ತಿದ್ದು, ಚಾಲಕನ ಅತಿ ವೇಗದಿಂದಾಗಿ ವಾಹನ ಅಪಘಾತಕ್ಕೀಡಾಗಿ, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಮೃತೂರು ಪೊಲೀಸರು ಕಾರಿನಲ್ಲಿದ್ದ ಕರುಗಳನ್ನು ಕೆಳಗಿಳಿಸಿ, ಅಪಘಾತದ ರಭಸಕ್ಕೆ ಕರು ಒಂದು ಸ್ಥಳದಲ್ಲೆ ಮೃತಪಟ್ಟಿದೆ. 22 ಸೀಮೆಹಸು ಕರುಗಳನ್ನು ರಕ್ಷಿಸಿ ಅವುಗಳನ್ನು ಗೋಶಾಲೆಗೆ ಕಳಿಸಲು ಸಿದ್ದತೆ ನಡೆಸಿದ್ದಾರೆ. ಕರುಗಳ ಕಾಲು, ಕುತ್ತಿಗೆ ಕಟ್ಟಿ ಸಾಗಿಸುವ ಪ್ರಕರಣದಡಿ ಕಾರಿನ ಚಾಲಕ, ಮಾಲೀಕನ ಮೇಲೆ ಕೇಸು ದಾಖಲಾಗಿದೆ.
Comments are closed.