ಆಧಾರ್ ಸೇವಾ ಕೇಂದ್ರದಲ್ಲಿ ಹೆಚ್ಚುವರಿ ಹಣವಸೂಲಿ: ಕರವೇ ಕಿಡಿ

139

Get real time updates directly on you device, subscribe now.


ಕುಣಿಗಲ್: ಪಟ್ಟಣದ ದೂರವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಾರ್ ಸೇವಾ ಕೇಂದ್ರದಲ್ಲಿ ಅಕ್ರಮವಾಗಿ ಹಣ ವಸೂಲು ಮಾಡುತ್ತಿದ್ದು ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ನಿಗದಿತ ಶುಲ್ಕ ಪಡೆಯಲು ಕ್ರಮವಹಿಸುವಂತೆ ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ದಿನೇಶ್ ಅಗ್ರಹಿಸಿದ್ದಾರೆ.

ನಾಗರೀಕರ ದೂರಿನ ಮೇರೆಗೆ ಮಂಗಳವಾರ ಕೇಂದ್ರಕ್ಕೆ ಭೇಟಿ ನೀಡಿದಾಗ ಕೇಂದ್ರದಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ಅಧಾರ್ ತಿದ್ದುಪಡಿ ಮಾಡಲು ನಮೂನೆ ನೀಡಲು ಹತ್ತು ರೂ. ಭರ್ತಿ ಮಾಡಲು ಪ್ರತ್ಯೇಕ ಶುಲ್ಕ ಪಡೆಯುತ್ತಿದ್ದು, ಇದರೊಂದಿಗೆ ಮಕ್ಕಳು ಮೊದಲ ಬಾರಿಗೆ ಅಧಾರ್ ಮಾಡಿಸಲು ಬಂದಾಗ ಉಚಿತ ಶುಲ್ಕ ಇದ್ದರೂ ತಲಾನೂರು ಪಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸದರಿ ಕೇಂದ್ರದ ಸಿಬ್ಬಂದಿ ನಮಗೆ ಅಧಾರ್ ಭರ್ತಿಮಾಡುವ ಅರ್ಜಿ ಸಿಗುವುದಿಲ್ಲ. ಹೀಗಾಗಿ ನಾವು ಡೌನ್ ಲೋಡ್ ಮಾಡಿ ಪ್ರಿಂಟ್ ಹಾಕಿಸುತ್ತಿದ್ದೇವೆ. ಅದರ ಖರ್ಚು ಪಡೆಯುತ್ತಿದ್ದೇವೆ. ಕೆಲವೊಂದು ಕಾರಣಕ್ಕೆ ಇಲ್ಲಿ ಸಿಬ್ಬಂದಿಗೆ ಪೆನಾಲ್ಟಿ ಹಾಕಿದ್ದು, ಅತ್ಯಂತ ಕಡಿಮೆ ವೇತನದಲ್ಲಿ ಕೆಲಸಮಾಡುತ್ತಿರುವ ನಾವುಗಳು ಭರ್ತಿಮಾಡಲಾಗದೆ ಹಣ ಪಡೆಯುತ್ತಿದ್ದೇವೆ. ನಾವೇನು ಹೆಚ್ಚುವರಿ ವಸೂಲು ಮಾಡುತ್ತಿಲ್ಲ ಎಂಬ ಉತ್ತರ ಹೇಳಿದರು.

ಈ ಬಗ್ಗೆ ಕಛೇರಿಯ ಜೆಟಿಒ ಅವರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ, ಸದರಿ ಅಧಿಕಾರಿ ತಾವು 4ಜಿ ತಂತ್ರಜ್ಞಾನ ಅಳವಡಿಕೆ ಸೇವೆಯಲ್ಲಿದ್ದು, ದೂರವಾಣಿ ಕೇಂದ್ರದಲ್ಲಿರುವ ಅಧಾರ್ ಸೇವಾ ಕೇಂದ್ರದ ಸಮಸ್ಯೆ ಬಗ್ಗೆ ದೂರು ಬಂದಿಲ್ಲ. ಇದೀಗ ದೂರು ಬಂದಿದ್ದು, ಈ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದರು. ಆಧಾರ್ ಸೇವಾ ಕೇಂದ್ರದಲ್ಲಿ ಹೆಚ್ಚುವರಿ ಹಣವಸೂಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್, ಇನ್ನಾದರೂ ತಾಲೂಕು ಆಡಳಿತ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡು ಅಧಾರ್ ಕಾರ್ಡ್ ಸೇವೆ ನೀಡುವ ದಿಸೆಯಲ್ಲಿ ಸಾಮಾನ್ಯ ಜನರ ಶೋಷಣೆ ತಪ್ಪಿಸುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!