ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಜೊತೆಗೆ ರಾಜ್ಯ ಸರ್ಕಾರ ಜನತೆಗೆ ಶಾಕ್ ನೀಡಿದೆ. ಮತ್ತೆ ವಿದ್ಯುತ್ ದರ ಏರಿಸುವ ಮೂಲಕ ಸರಕಾರ ಮತ್ತೆ ಹೊರೆ ಏರಿದೆ.
ಆದಾಯದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್ ದರವನ್ನು ಏರಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ, ಬೆಸ್ಕಾಂ ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 51 ಪೈಸೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ 50 ಪೈಸೆ ಏರಿಕೆ ಮಾಡಲಾಗಿದೆ.
ಈ ಏರಿಕೆ ಇಂಧನ ಹೊಂದಾಣಿಕೆ ಶುಲ್ಕವನ್ನು ಮರುಪಡೆಯಲು ಮಾಡಿದ ವಾರ್ಷಿಕ ಪರಿಷ್ಕರಣೆಯ ಭಾಗವಾಗಿದೆ ಎಂದು ಇಲಾಖೆ ಹೇಳಿದೆ. ಆದೇಶವು ಎಲ್ಲಾ ಎಸ್ಕಾಮ್ ಗಳಿಗೆ ಅನ್ವಯಿಸುತ್ತದೆ. ಇಂಧನ ಹೊಂದಾಣಿಕೆ ವೆಚ್ಚದಲ್ಲಿ ಜುಲೈ 1 ರಿಂದ ಡಿಸೆಂಬರ್ 31, 2023 ರವರೆಗೆ ಬದಲಾವಣೆ ಇರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ. ಜುಲೈ 1 ರಿಂದ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
Comments are closed.