ಐದು ವರ್ಷ ಗ್ಯಾರಂಟಿ ಮುಂದುವರೆಸ್ತೇವೆ: ಪರಂ

ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ಯೋಜನೆ ಜಾರಿ

88

Get real time updates directly on you device, subscribe now.


ತುಮಕೂರು: ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಚುನಾವಣೆ ವೇಳೆ ಗ್ಯಾರಂಟಿ ಭರವಸೆ ಕೊಟ್ಟಿದ್ರು, ಕೊಟ್ಟ ಭರವಸೆಯಂತೆ ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತೀರ್ಮಾನ ಆಗಿದೆ. ಅದರ ಪ್ರೋಸಿಜರ್ ಬಗ್ಗೆ ಶುಕ್ರವಾರ ಚರ್ಚೆ ಆಗಿದೆ. ಅನುಷ್ಠಾನ ಮಾಡೋದಕ್ಕೆ ಆರಂಭ ಮಾಡುತ್ತೇವೆ. ಸಂಪನ್ಮೂಲಗಳ ಕ್ರೂಡೀಕರಣದ ಪ್ರಶ್ನೆ ಎಲ್ಲರೂ ಎತ್ತಿದ್ರು, ವಿರೋಧ ಪಕ್ಷದವರು ಇದನ್ನು ಒಂದು ಅಸ್ತ್ರವಾಗಿ ಪ್ರಯೋಗ ಮಾಡಿದ್ರು, ಹಣಕಾಸು ವ್ಯಯ ಆಗದೆ ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಅನಾವಶ್ಯಕವಾದ ಯೋಜನೆ, ಕಾರ್ಯಕ್ರಮ ಇದ್ದರೆ ಅದನ್ನು ಸ್ಥಗಿತ ಮಾಡುತ್ತೇವೆ. ಎಲ್ಲಾ ಯೋಜನೆಗಳ ಡಿಪಿಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಭಿವೃದ್ಧಿ ಕುಂಠಿತವಾಗದ ರೀತಿಯಲ್ಲಿ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದರು.
ನಿಗಮ ಮಂಡಳಿ ಅಗತ್ಯ ಇದ್ದರೆ ಅದನ್ನು ಪರಿಶೀಲನೆ ಮಾಡುತ್ತೇವೆ. ಜನಪರ ಆಡಳಿತ ಕೊಡುತ್ತೇವೆ ಎಂದಿದ್ದೇವೆ. ಬೆಲೆ ಏರಿಕೆ ವಿರುದ್ಧ ಜನ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಅದನ್ನು ಗಮನ ಇಟ್ಟುಕೊಂಡು ಆಡಳಿತ ನಡೆಸುತ್ತೇವೆ. ನಾವು ಐದು ವರ್ಷದ ವರೆಗೂ ಈ ಗ್ಯಾರಂಟಿ ಮುಂದುವರೆಸುತ್ತೇವೆ ಎಂದರು.

ಹಾಲಿನ ಪ್ರೋತ್ಸಾಹ ಧನ 7 ರೂ.ಗೆ ಹೆಚ್ಚಿಗೆ ಮಾಡುತ್ತೇವೆ. ಬೆಂಗಳೂರಿನ ಹಾಲು ಒಕ್ಕೂಟದ್ದು ಅವರ ಸ್ವತಃ ನಿರ್ಧಾರದಿಂದ 1.50 ರೂ. ಕಡಿಮೆ ಮಾಡಿದ್ದಾರೆ. ಅದು ಸರ್ಕಾರದ ನಿರ್ಧಾರ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತುಮಕುರು ಜಿಲ್ಲೆ ಉಸ್ತವಾರಿ ನಿಮಗೆ ಸಿಗುತ್ತಾ ಎಂಬ ಪ್ರಶ್ನೆಗೆ ಉಸ್ತುವಾರಿ ನೀಡೋದು ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು, ಇನ್ನೆರಡು ದಿನದಲ್ಲಿ ಉಸ್ತುವಾರಿ ಘೋಷಣೆ ಆಗಬಹುದು ಎಂದರು.

ಜುಲೈ ತಿಂಗಳಿನಲ್ಲಿ ಸಿಎಂ ಬಜೆಟ್ ಮಂಡನೆ ಮಾಡುತ್ತಾರೆ ಬಜೆಟ್ ನಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಅನುದಾನ ಮೀಸಲು ಇಡಲಾಗುವುದು. ಯೋಜನೆ ಮುಗಿಸಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಔರಾದ್ಕರ್ ವರದಿ ಜಾರಿ ಬಗ್ಗೆ ಪರಿಶೀಲನೆ ಮಾಡುತ್ತೇನೆ. 7ನೇ ವೇತನ ಆಯೋಗ ಜಾರಿ ಮಾಡಿದರೆ ಔರಾದ್ಕರ್ ವರದಿ ಪ್ರತ್ಯೇಕವಾಗಿ ಜಾರಿ ಮಾಡುವ ಅವಶ್ಯಕತೆ ಇಲ್ಲ. ಸದ್ಯದಲ್ಲೇ 15 ಸಾವಿರ ಪೊಲೀಸ್ ಪೇದೆಗಳ ನೇಮಕ ಮಾಡಲಾಗುತ್ತದೆ ಎಂದರು.

ಪಿಎಸ್ಐ ನೇಮಕಾತಿ ಹಗರಣ ವಿಚಾರದ ಬಗ್ಗೆ ಪ್ರಸ್ತಾಪಿಸಿ ಈ ಪ್ರಕರಣದಲ್ಲಿ ತನಿಖೆ ಕಾನೂನು ಪ್ರಕಾರ ನಡೀತಿದೆ. 53 ಜನರು ತಪ್ಪಿತಸ್ಥರು ಎಂದು ಕಂಡು ಬಂದಿದೆ. ಮರು ಪರೀಕ್ಷೆ ಮಾಡಬಾರದು ಎಂದು ಕೋರ್ಟ್ ತಡೆ ನೀಡಿದೆ. ಕಾನೂನು ತಜ್ಞರ ಸಲಹೆ ಪಡೆದು ಅವರಿಗೆ ನ್ಯಾಯ ಒದಗಿಸು ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ಶುಭಾಶಯ ಸಲ್ಲಿಕೆ
ಡಾ.ಜಿ.ಪರಮೇಶ್ವರ್ ಅವರು ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಆಗಮಿಸಿದಾಗ ವಿದ್ಯಾರ್ಥಿಗಳು ಹರ್ಷೊದ್ಘಾರ ವ್ಯಕ್ತಪಡಿಸಿದರು. ಅಲ್ಲದೆ ವಿವಿಧ ರೀತಿಯ ಶುಭಾಶಯ ಕೋರುವ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿ ಪರಂ ಪರ ಜಯಕಾರ ಹಾಕಿದರು. ಜೊತೆಗೆ ಸಿಹಿ ನೀಡಿ ಖುಷಿ ಹಂಚಿಕೊಂಡರು.

Get real time updates directly on you device, subscribe now.

Comments are closed.

error: Content is protected !!