ಪರಿಸರ ಕಾಪಾಡದಿದ್ದರೆ ಅಪಾಯ ಗ್ಯಾರಂಟಿ

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಕಾಪಾಡಿ: ಡಾ.ವಿದ್ಯಾಕುಮಾರಿ

90

Get real time updates directly on you device, subscribe now.


ತುಮಕೂರು: ಅರಣ್ಯ ಇಲಾಖೆ ವತಿಯಿಂದ ನಗರದ ಗೊಲ್ಲಹಳ್ಳಿಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಪರಿಸರ ಭಾಗ ಮನುಷ್ಯ, ಆದರೆ ಮನುಷ್ಯ ಪರಿಸರ ತನ್ನ ಭಾಗ ಎಂದು ತಿಳಿದು ಅದರ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಪ್ರಕೃತಿ ವಿಕೋಪ ನಾವು ಕಾಣಬಹುದಾಗಿದೆ. ಪರಿಸರದ ಭಾಗವಾಗಿ ನಾವೆಲ್ಲರು ಅದನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಖಾಲಿ ಜಾಗವಿರುವುದೇ ಪ್ಲಾಸ್ಟಿಕ್, ಕಸ, ಕಡ್ಡಿ ಹಾಕಲಿಕ್ಕೆ ಎಂಬ ಮನುಷ್ಯರ ತಪ್ಪು ತಿಳುವಳಿಕೆಯಿಂದಾಗಿ ಪರಿಸರ ಹಾಳು ಮಾಡುತ್ತಿದ್ದೇವೆ. ಹತ್ತಾರು ವರ್ಷವಾದರೂ ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯದೆ ಉಷ್ಣಾಂಶ ಹೆಚ್ಚು ಮಾಡಿ ಅದರಿಂದ ಪ್ರಕೃತಿ ವಿಕೋಪ ಜರುಗವಂತೆ ಮಾಡುತ್ತದೆ. ಹಾಗಾಗಿ ಇದರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಂಡು ಸ್ವಚ್ಛತೆಯ ಜೊತೆಗೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರದ ಅಸಮತೋಲನ ಹೋಗಲಾಡಿಸಲು ಕ್ರಮ ಕೈಗೊಳ್ಳಬೇ ಕಾಗಿದೆ ಎಂದು ಸಿಇಓ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ನಗರಪಾಲಿಕೆ ಆಯುಕ್ತ ದರ್ಶನ್ ಮಾತನಾಡಿ, ತುಮಕೂರು ಜಿಲ್ಲೆ ಅತ್ಯಂತ ದೊಡ್ಡ ಜಿಲ್ಲೆ, ಇಲ್ಲಿನ ಪರಿಸರ ಕಾಪಾಡಬೇಕೆಂದರೆ ನಾವುಗಳು ಹೆಚ್ಚು ಹೆಚ್ಚು ಮರ ನಡೆಬೇಕಾಗುತ್ತದೆ. ಅದರಲ್ಲಿ ಸಕಲ ಜೀವರಾಶಿಗಳಿಗೆ ಮೇವು ಒದಗಿಸುವ ಗಿಡ ಮರಗಳನ್ನು ನೆಟ್ಟು ಪ್ರಾಣಿ ಪಕ್ಷಿಗಳಿಗೆ ಆಹಾರ ದೊರೆಯುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಹೊಂಗೆ, ಹುಣಸೆ ಇನ್ನಿತರ ಮರಗಳನ್ನು ಬೆಳೆಸಿ ಆ ಮೂಲಕ ಪ್ರಕೃತಿಯ ಎಲ್ಲಾ ಜೀವರಾಶಿಗಳು ನೆಮ್ಮದಿಯ ಬದುಕಿಗೆ ಅವಕಾಶ ನೀಡಬೇಕೆಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಡಿಎಫ್ಓಗಳಾದ ಅನುಪಮ, ಸಾಮಾಜಿಕ ವಲಯ ಡಿಎಫ್ಓ ನಾಗರಾಜು, ಎಸಿಎಫ್ ಮಹೇಶ್ ಮಾಲಗತ್ತಿ, ಆರ್ಎಫ್ಓ ಪವಿತ್ರ, ಇಓ ಜೈಪಾಲ್, ಎನ್ಸಿಸಿ ಲೆಫ್ಟಿನೆಂಟ್ ಪ್ರದೀಪ್ ಕುಮಾರ್, ಹವಲ್ದಾರ್ ಚಂದ್ರಶ್ರೇಷ್ಟ, ಗ್ರಾಪಂ ಉಪಾಧ್ಯಕ್ಷ ಸಂಪತ್ ಕುಮಾರ್, ಸದಸ್ಯರಾದ ಬಸವರಾಜು, ಅಸೀಫ್ ವುಲ್ಲಾ ಖಾನ್, ಎನ್ಸಿಸಿ ಕೆಡೆಟ್, ಶಾಲಾ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!