ತುರುವೇಕೆರೆ: ತಾಲೂಕಿನ ಬೆಂಕಿಕೆರೆ ಗ್ರಾಮದಲ್ಲಿ ಹೊಟ್ಟೆನೋವು ತಾಳಲಾರದೇ ಯುವತಿ ನೇಣಿಗೆ ಶರಣಾಗಿದ್ದಾಳೆ.
ತಾಲೂಕಿನ ಬೆಂಕಿಕೆರೆ ಗ್ರಾಮದ ವಾಸಿ ಉಮಾ ಅವರ ಮೂರನೇ ಮಗಳು ನಂದಿನಿ (18) ನೇಣಿಗೆ ಶರಣಾದ ಯುವತಿ. ಎಂದಿನಂತೆ ತೋಟದಿಂದ ಸಂಜೆ ಮನೆಗ ಬರುವ ವೇಳೆಗೆ ಮಗಳು ನಂದಿನಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಳು ಎಂದು ತಾಯಿ ಉಮಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮೃತಳ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
Comments are closed.