ಹೈನುಗಾರರಿಗೆ ಹಾಲಿನ ದರದಲ್ಲಿ ಕಡಿತ ಇಲ್ಲ

102

Get real time updates directly on you device, subscribe now.


ತುರುವೇಕೆರೆ: ಹೈನುಗಾರರಿಂದ ಹಾಲು ಖರೀದಿಸುವ ದರದಲ್ಲಿ ಯಾವುದೇ ಕಡಿತ ಇಲ್ಲ ಎಂದು ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಅಕಾಲಿಕ ಮರಣಕ್ಕೀಡಾದ ರಾಸುಗಳ ಪರಿಹಾರ ವಿಮೆ ಹಣದ ಚೆಕ್ ವಿತರಿಸಿ ಮಾತನಾಡಿ, ಕೊರೊನಾ ಸಂದರ್ಭದಲ್ಲೂ ಸಹ ಹೈನುಗಾರರಿಗೆ ಹಾಲಿನ ದರ ನೀಡಲಾಗಿತ್ತು. ತುಮುಲ್ ಹೈನುಗಾರರಿಗೆ ಉತ್ತಮ ಹಾಲಿನ ದರ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಸದ್ಯ ಹೈನುಗಾರರಿಂದ ಖರೀದಿಸುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದರು.

ತುಮುಲ್ ವ್ಯಾಪ್ತಿಯ ಸುಮಾರು 1.25 ಲಕ್ಷ ರಾಸುಗಳಿಗೆ ಉಚಿತ ವಿಮೆ ಮಾಡುವ ಸಲುವಾಗಿ ವಿಶೇಷ ಕಾರ್ಯಕ್ರಮ ಜಾರಿಗೊಳಿಸಿತ್ತು. ರಾಸುಗಳ ಅಕಾಲಿಕ ಮರಣಕ್ಕೀಡಾದ ಸಂದರ್ಭದಲ್ಲಿ ಹೈನುಗಾರರು ಆರ್ಥಿಕ ಸಂಕಷ್ಟಕ್ಕೀಡಾಗದಂತೆ ಕ್ರಮ ವಹಿಸಲಾಗಿದೆ. ಹುಲ್ಲಿನ ಬಣವೆ ಸುಟ್ಟುಹೋದ ಸಂದರ್ಭದಲ್ಲಿ ಪರಿಹಾರ ಧನ, ಪಡ್ಡೆ ರಾಸುಗಳ ಮರಣಕ್ಕೆ ಪರಿಹಾರ ವಿಮೆ, ಸದಸ್ಯರ ಮರಣ ಪರಿಹಾರ ವಿಮೆ, ಹೈನುಗಾರರ ಆರೋಗ್ಯ ಸಂರಕ್ಷಿಸುವ ನಿಟ್ಟಿನಲ್ಲಿ ವೈದ್ಯಕೀಯ ವೆಚ್ಚ ಭರಿಸಲಾಗುತ್ತಿದೆ. ತುರುವೇಕೆರೆ ವ್ಯಾಪ್ತಿಯ ಹೈನುಗಾರರಿಗೆ ಇಂದು ಒಟ್ಟು 12.5 ಲಕ್ಷ ಮೌಲ್ಯದ ಪರಿಹಾರದ ಚೆಕ್ ವಿತರಿಸಲಾಗಿದೆ. ಹೈನುಗಾರರು ಉತ್ತಮ ಗುಣಮಟ್ಟದ ಹಾಲು ನೀಡುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎನ್.ಮಾವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಶಿವಕುಮಾರ್, ಗಂಗಾಧರ್, ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್, ದಿವಾಕರ್ ಹಾಗೂ ತಾಲೂಕಿನ ವ್ಯಾಪ್ತಿಯ ಹಾಲು ಉತ್ಪಾದಕ ಸಂಘದ ಸದಸ್ಯರು ಇದ್ದರು.

Get real time updates directly on you device, subscribe now.

Comments are closed.

error: Content is protected !!