ಅಕ್ಕಮಹಾದೇವಿ ಆಧ್ಯಾತ್ಮ ಸಾಧಕಿ: ನಾಗಭೂಷಣ ಸ್ವಾಮಿ

183

Get real time updates directly on you device, subscribe now.


ತುಮಕೂರು: ಅಕ್ಕಮಹಾದೇವಿ ಅಧ್ಯಾತ್ಮ ಸಾಧಕಿಯಾಗಿದ್ದೂ, ಅವರಲ್ಲಿದ್ದ ವಿಚಾರಶೀಲತೆಯನ್ನು ಈಗಿನ ಹೆಣ್ಣು ಮಕ್ಕಳು ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಅಣ್ಣಾ, ನಾನು ಹೆಂಗೂಸಲ್ಲ ಅಕ್ಕಮಹಾದೇವಿ ವಚನಗಳ ಒಂದು ವಿಶ್ಲೇಷಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನ್ನ ದೇಹವಷ್ಟೇ ಹೆಂಗಸಿನದು, ಅನುಭವದ ವ್ಯಾಪ್ತಿ ಗಂಡನ್ನು ಮೀರಿಸುವಂತದ್ದು ಎಂದು ಬಾಳಿದವರು ಅಕ್ಕಮಹಾದೇವಿ, ಸಬಲೀಕರಣದ ದಾರಿಯಲ್ಲಿ ಮಹಿಳೆಯನ್ನು ನೋಡ ಬಯಸುವವರು ತನ್ನ ಉದಾಹರಣೆಯನ್ನು ಪಡೆಯಬಹುದು ಎಂಬ ವಿಶ್ವಾಸದ ಬದುಕು ನಡೆಸಿದವರು ಅಕ್ಕಮಹಾದೇವಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ. ಹೆಚ್. ಕೆ.ಶಿವಲಿಂಗ ಸ್ವಾಮಿ, ಭಕ್ತಿಯ ಅಭಿವ್ಯಕ್ತಿಯನ್ನು 12ನೇ ಶತಮಾನದಲ್ಲಿ ಯಾವ ರೀತಿ ಅಭಿವ್ಯಕ್ತ ಪಡಿಸಿದ್ದಾರೆ ಎನ್ನವುದನ್ನುಅಕ್ಕಮಹಾದೇವಿ ಅವರ ವಚನಗಳಲ್ಲಿ ನಾವು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಆಂಗ್ಲ ಸಾಹಿತ್ಯಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಎನ್. ಎಸ್.ಗುಂಡೂರ್ ಭಾಗವಹಿಸಿದ್ದರು. ತುಮಕೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ, ಉಪನ್ಯಾಸಕಿ ಆಶಾರಾಣಿ ಕೆ. ಬಗ್ಗನಡು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!