ವ್ಯಕ್ತಿತ್ವ ವಿಕಸನದಿಂದ ತಮ್ಮತನದ ಅರಿವು ಸಾಧ್ಯ

66

Get real time updates directly on you device, subscribe now.


ತುಮಕೂರು: ಹದಿಹರೆಯದ ವಯಸ್ಸಿನಲ್ಲಿ ಹಲವಾರು ಬಗೆಯ ಗೊಂದಲ ಮನಸ್ಸಿನಲ್ಲಿರುವುದು ಸಹಜ, ಅದನ್ನೆಲ್ಲವನ್ನೂ ಮೀರಿ ಗೆಲ್ಲಬೇಕು. ನಿಮ್ಮೊಳಗೆ ಶ್ರದ್ಧಾಭಕ್ತಿಗಳಿದ್ದಾಗ ಯಾವ ಹಂತಕ್ಕಾದರೂ ಏರಬಹುದು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.

ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಕಲ್ಪಿಸಿಕೊಟ್ಟಲ್ಲಿ ಅವರು ತಮ್ಮ ಯಶಸ್ಸಿನ ಗುರಿ ತಲುಪುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತವಾದ ಪ್ರತಿಭೆ ಇದ್ದೇ ಇರುತ್ತದೆ. ತಮ್ಮ ಕೌಶಲಗಳೇನು ಎಂಬುದನ್ನು ಮಕ್ಕಳು ತಿಳಿದುಕೊಂಡು ಅದರಲ್ಲಿ ಪರಿಣಿತಿ ಸಾಧಿಸುವಂತಾಗಬೇಕು. ವ್ಯಕ್ತಿತ್ವ ವಿಕಸನ ಕಾರ್ಯಾಗಾರದ ಮೂಲಕ ಮಕ್ಕಳು ತಮ್ಮನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಒದಗಿಸಿದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಪ್ರದೀಪ್ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತರಬೇತುದಾರರಾಗಿ ಭಾಗವಹಿಸಿದ ಕೈವಲ್ಯಅಕಾಡೆಮಿ ಬೆಂಗಳೂರಿನ ಅಂತಾರಾಷ್ಟ್ರೀಯ ತರಬೇತುದಾರ ಡಾ.ಲೋಕೇಶ್ ಮಾತನಾಡಿ ಸದಾ ಜಾಗೃತ ಮನಸ್ಥಿತಿ, ಸಾಮಾನ್ಯ ಪ್ರಜ್ಞೆ, ಕಲಿಸುವುದನ್ನುಗಮನವಿಟ್ಟು ಕೇಳುವ ಕೌಶಲ್ಯ ನಿಮ್ಮೊಳಗಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ, ಯಾರನ್ನೇ ಆದರೂ ನೋಡಿದ ತಕ್ಷಣ ಅವರ ಕುರಿತು ನಿರ್ಧಾರಕ್ಕೆ ಬರಬೇಡಿ. ಹೊರಗಿನಿಂದ ಸದಾ ಹಸನ್ಮುಖರಾಗಿರುವವರು ಅಂತರಂಗದಲ್ಲಿ ದುಃಖಿಗಳಾಗಿರಬಹುದು. ಆದರೆ ಅವರ ನಗುವಿನಿಂದ ಅವರು ಬದುಕನ್ನು ಗೆದ್ದಿರುತ್ತಾರೆ. ಸುತ್ತಲಿರುವವರನ್ನುಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ, ವಿದ್ಯಾರ್ಥಿಗಳಾದವರು ಶಿಕ್ಷಕರಲ್ಲಿ ಪ್ರಶ್ನೆಗಳನ್ನು ಕೇಳಿ ಅನುಮಾನ ಪರಿಹರಿಸಿಕೊಳ್ಳಬೇಕೇ ಹೊರತು ಶಿಕ್ಷಕರನ್ನೇ ಪ್ರಶ್ನಿಸುವಂಥ ಮನೋಭಾವ ಬೆಳೆಸಿಕೊಳ್ಳಬಾರದು. ವಿದ್ಯಾರ್ಜನೆ ಮಾಡುವಲ್ಲಿ ವಿನಯವಂತಿಕೆ ಇರಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿ.ಎಸ್.ಆರ್, ಕೈವಲ್ಯಅಕಾಡೆಮಿಯ ಪ್ರಬಂಧಕ ಗೋಪಾಲ್, ಉಪನ್ಯಾಸಕಿ ಆರತಿ ಪಟ್ರಮೆ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!