ತುಮಕೂರು ಜಿಲ್ಲೆ ಅಭಿವೃದ್ಧಿಗೆ ಆದ್ಯತೆ

ಮೂರನೇ ಬಾರಿಗೆ ಉಸ್ತುವಾರಿ ಸಿಕ್ಕಿದೆ: ಡಾ.ಜಿ.ಪರಮೇಶ್ವರ್

123

Get real time updates directly on you device, subscribe now.


ತುಮಕೂರು: ಮೂರನೇ ಬಾರಿ ತುಮಕೂರು ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದೇನೆ. ಸಿಎಂ ಎಲ್ಲಾ ಸಚಿವರಿಗೂ ಉಸ್ತುವಾರಿ ಕೊಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿ, ಶಾಂತಿ ಕಾಪಾಡುವ ಜವಾಬ್ದಾರಿ ಉಸ್ತುವಾರಿಗಳಿರುತ್ತೆ, ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆ ಇರುತ್ತೆ. ಮಳೆ, ಪ್ರವಾಹದಿಂದ ಬೆಳೆ ಹಾನಿಯಾಗುತ್ತದೆ. ಕೆಲ ಜಿಲ್ಲೆಗಳಲ್ಲಿ ಮಳೆಯಾಗದೆ ನೀರಿನ ಸಮಸ್ಯೆ ಇರುತ್ತದೆ. ಜಿಲ್ಲೆಯ ಸಮಸ್ಯೆಗಳಿಗೆ ತಕ್ಕಂತೆ ಸಚಿವರು ಕ್ರಮಕೈಗೊಳ್ಳಬೇಕು. ನಮ್ಮ ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ, ಶಿರಾದಲ್ಲಿ ಮಳೆ ಕಡಿಮೆ, ಅಲ್ಲಿ ಬರ ಹೆಚ್ಚು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಕುಣಿಗಲ್, ಗುಬ್ಬಿ, ತಿಪಟೂರಿನಲ್ಲಿ ಒಳ್ಳೆ ಮಳೆಯಾಗುತ್ತದೆ. ಹೇಮಾವತಿ ನೀರು ಸಹ ಬರುತ್ತದೆ, ಅಲ್ಲಿನ ಸಮಸ್ಯೆಗಳೇ ಬೇರೆ, ರೈತರಿಗೆ ಬೇಕಾದ ಗೊಬ್ಬರ, ಬಿತ್ತನೆ ಬೀಜವನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕೆಂದು ಸಿಎಂ ಕ್ರಮ ಕೈಗೊಂಡಿದ್ದಾರೆ ಎಂದರು.

ಗೃಹ ಇಲಾಖೆಯಲ್ಲಿ ನಾನೊಂದು ಕಾನೂನು ಮಾಡಲು ಬರಲ್ಲ. ಇನ್ನೊಬ್ಬರು ಇನ್ನೊಂದು ಮಾಡಲು ಬರಲ್ಲ. ಕುಂಕುಮ, ವಿಭೂತಿ ಇಟ್ಟು ಕೊಳ್ಳಬಾರದು ಅಂತ ಹೇಳಿದ್ದೇನೆ ಅಂತ ವೈರಲ್ ಮಾಡಿದ್ದಾರೆ. ಅದನ್ನು ನಾನು ಹೇಳಿಯೇ ಇಲ್ಲ, ನನಗೆ ಪ್ರಜ್ಞೆಯಿದೆ. ನಾನು ಮೂರು ಬಾರಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಮಾನ್ಯೂಯಲ್ ಇದೆ. ಅದನ್ನು ಬಿಟ್ಟು ಬೇರೆ ಮಾಡಲು ಬರೊದಿಲ್ಲ. ಹಿರಿಯ ಅಧಿಕಾರಿಗಳು ಮಾನ್ಯೂಯಲ್ ಅನುಷ್ಠಾನ ಮಾಡುತ್ತಾರೆ ಎಂದರು.
ನಾನು ಗೃಹ ಸಚಿವನಾಗಿದ್ದಾಗ ಒಂದು ಕಾನೂನು ಮಾಡಲು ಹೋಗುವುದು. ಇನ್ನೊಬ್ಬರು ಇನ್ನೊಂದು ಕಾನೂನು ಮಾಡಲು ಬರುವುದಕ್ಕೆ ಅವಕಾಶವಿಲ್ಲ. ಯಾರು ವೈರಲ್ ಮಾಡಿದ್ದಾರೋ ಅವರನ್ನು ಹುಡುಕುತ್ತಿದ್ದೇವೆ. ಇಂತಹವನ್ನೆಲ್ಲಾ ಸುಮ್ಮನೆ ಬಿಡೊಕ್ಕೆ ಆಗಲ್ಲ. ಸುಳ್ಳು ಸುದ್ದಿಗಳನ್ನು ಮಾಡಬಾರದು. ರಾಜ್ಯದಲ್ಲಿ ಶಾಂತಿ ಹಾಳಾಗುತ್ತದೆ, ಪ್ರಚೋದನೆಯಾಗುತ್ತದೆ. ರಾಜ್ಯದಲ್ಲಿ ಕೋಮು ಪ್ರೇರಿತ ಗಲಾಟೆಗಳು ಆಗಬಾರದು ಎಂಬುದು ನಮ್ಮ ನಿರೀಕ್ಷೆ ಅಪೇಕ್ಷೆ, ನಮ್ಮ ಪ್ರಣಾಳಿಕೆ ಶೀರ್ಷಿಕೆಯಲ್ಲೇ ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೀವಿ ಅಂತಾ ಹೇಳಿದ್ದೇವೆ. ಎಲ್ಲಾರೂ ಶಾಂತಿಯಿಂದ ಬಾಳೋಣ ಅನ್ನೊದು ನಮ್ಮ ಅಪೇಕ್ಷೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ. ನಾವು ಪೇ ಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಸಿ ಅವರಿಗೇನಾದರೂ ಅಂತಹದ್ದು ಮಾಹಿತಿ ಇದ್ರೆ ಅಂಟಿಸಲಿ, ಪಾಪಾ ಅವರಿಗೆ ಯಾಕೆ ಬ್ಯಾಡ ಅನ್ನಲಿ ಎಂದರು.

ಈಗಾಗಲೇ ಕೇರಳಕ್ಕೆ ಮಾನ್ ಸೂನ್ ಪ್ರವೇಶವಾಗಿದೆ. ಶೀಘ್ರದಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆಗಳಿರುತ್ತವೆ. ಮಳೆ ಹೆಚ್ಚಾಗಿ, ಅತಿವೃಷ್ಟಿಯಾಗಿ, ಪ್ರವಾಹ, ಬೆಳೆನಷ್ಟ ಕೆಲವು ಜಿಲ್ಲೆಗಳಲ್ಲಿರುತ್ತವೆ. ಕೆಲವು ಜಿಲ್ಲೆಗಳಲ್ಲಿ ಮಳೆಯೇ ಬರುವುದಿಲ್ಲ. ಬೇಸಿಗೆ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಹಾಗಾಗಿ ಆಯಾಯ ಜಿಲ್ಲೆಗಳಲ್ಲಿ ಆಯಾಯ ಸಚಿವರು ಎಲ್ಲವನ್ನೂ ಗಮನಿಸಿ ಸರಕಾರದ ವತಿಯಿಂದ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಬೇಕಾಗುತ್ತದೆ ಎಂದರು.

ನಮ್ಮ ಜಿಲ್ಲೆಯಲ್ಲಿ ತಮಗೆಲ್ಲಾ ಗೊತ್ತಿರುವಂತೆ ಕೆಲವು ಸಮಸ್ಯೆ ಕೃಷಿಗೆ ಸಂಬಂಧಿಸಿದಂತೆ ಇವೆ. ಒಂದು ಕಡೆ ಪಾವಗಡ, ಶಿರಾ, ಕೊರಟಗೆರೆಯ ಅರ್ಧಭಾಗ, ಮಧುಗಿರಿ ಇವೆಲ್ಲಾ ಒಣ ಪ್ರದೇಶಗಳು, ಬಹಳಷ್ಟು ಸಂದರ್ಭದಲ್ಲಿ ಕುಡಿಯುವ ನೀರು, ಕೃಷಿಗೆ ಸಮಸ್ಯೆ ಆಗಿದೆ. ಹಾಗಾಗಿ ಆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Get real time updates directly on you device, subscribe now.

Comments are closed.

error: Content is protected !!