ಬಾವಿಗೆ ಬಿದ್ದು ಅಣ್ಣ ತಮ್ಮ ಸಾವು

9,551

Get real time updates directly on you device, subscribe now.


ಶಿರಾ: ಮೇಕೆಗಳಿಗೆ ಮೇವು ತರಲು ಹೋಗಿ ಬಾವಿಯ ದಡದಲ್ಲಿ ಸೊಪ್ಪು ಕಡಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಅಣ್ಣ- ತಮ್ಮ ಇಬ್ಬರೂ ಸಾವನ್ನಪ್ಪಿರುವ ಘಟನೆ ತಾಲೂಕಿನ ಹುಲಿಕುಂಟೆ ಹೋಬಳಿ ದ್ವಾರನಕುಂಟೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೃತಪಟ್ಟ ದುರ್ದೈವಿಗಳು ದ್ವಾರನಕುಂಟೆ ಗ್ರಾಮದ ಸತೀಶ್ (25) ಹಾಗೂ ಪ್ರಸನ್ನ (29) ಎಂದು ತಿಳಿದು ಬಂದಿದೆ. ಸತೀಶ್ ಹಾಗೂ ಪ್ರಸನ್ನ ಇಬ್ಬರು ಶನಿವಾರ ಬೆಳಗ್ಗೆ ಮೇಕೆಗಳಿಗೆ ಮೇವು ತರಲು ಹೋಗಿದ್ದು, ಗ್ರಾಮದಿಂದ ಸ್ವಲ್ಪ ದೂರದಲ್ಲಿ ಬಾವಿ ಸುತ್ತ ಇದ್ದ ಸೊಪ್ಪನ್ನು ನೋಡಿದ ಸಹೋದರರು ಸೊಪ್ಪು ಕಡಿಯಲು ಮುಂದಾಗಿದ್ದಾರೆ. ಬಾವಿಯ ದಡದಲ್ಲಿ ಸೊಪ್ಪು ಕಡಿಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಪ್ರಸನ್ನ ಬಾವಿಯೊಳಗೆ ಬಿದ್ದಿದ್ದಾನೆ. ಅಣ್ಣನ ಕಾಪಾಡಲು ಸತೀಶ ಕೂಡ ಬಾವಿಗೆ ಧುಮುಕಿದ್ದಾನೆ. ಬಳಕೆಯಾಗದೆ ಆಳವಿದ್ದ ಬಾವಿ ನೀರಿನಲ್ಲಿ ಇಬ್ಬರಿಗೆ ಮೇಲೆ ಬರಲು ಸಾಧ್ಯವಾಗದ ಕಾರಣ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪಟ್ಟನಾಯಕನ ಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಭವಿತ ಅವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಕರೆಸಿ ಮೃತ ದೇಹಗಳನ್ನು ಹೊರ ತೆಗೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!