ಮಧುಗಿರಿ: ಒಂದು ವರ್ಷದ ಹೆಣ್ಣು ಹಸುಗೂಸನ್ನು ಹೆತ್ತ ತಾಯಿಯೇ ಅಮಾನುಷವಾಗಿ ಬ್ಲೇಡಿನಿಂದ ಕೊಯ್ದು ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಪಟ್ಟಣದ ಡೂಂ ಲೈಟ್ ವೃತ್ತದ ಸಮೀಪ ಇರುವ ತಿಪ್ಪಾಪುರ ಛತ್ರದ ಹಿಂಭಾಗದಲ್ಲಿರುವ ಮನೆಯಲ್ಲಿ ಘಟನೆ ನಡೆದಿದ್ದು, ತಾಯಿ ಶ್ವೇತಾ (28) ತನ್ನ ಮನೆಯಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗು ಕ್ರಿತೀಶ್ ಳ ಕೈಯನ್ನು ಏಕಾಏಕಿ ಕೊಯ್ದ ಹಿನ್ನೆಲೆಯಲ್ಲಿ ತೀವ್ರ ರಕ್ತ ಸ್ರಾವವಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ನಂತರ ತಾಯಿಯೂ ಸಹ ಕುತ್ತಿಗೆ ಕೊಯ್ದು ಕೊಂಡಿದ್ದಾಳೆ. ತಕ್ಷಣ ಅಕ್ಕ ಪಕ್ಕದ ನಿವಾಸಿಗಳು ಇಬ್ಬರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದಾಗ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಶಿವಾನಂದನ ಪತ್ನಿಯಾದ ಈಕೆಯು ಮಾನಸಿಕ ಅಸ್ವಸ್ಥೆಯಾಗಿದ್ದು, ನಿಮಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಡಿವೈಎಸ್ಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಸರ್ಕಲ್ ಇನ್ಸ್ ಪೆಕ್ಟರ್ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.