ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ ಲವ್ವಿಡವ್ವಿ

ಆಕ್ರೋಶಗೊಂಡ ವಿದ್ಯಾರ್ಥಿಗಳು- ಕೊಠಡಿಯಲ್ಲಿ ಉಪನ್ಯಾಸಕನ ಕೂಡಿ ಹಾಕಿ ಪ್ರತಿಭಟನೆ

452

Get real time updates directly on you device, subscribe now.


ತಿಪಟೂರು: ಉಪನ್ಯಾಸಕ ಅಂದ್ರೆ ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶಕ, ಅವರ ಬದುಕಿಗೆ ದಾರಿ ತೋರಿಸುವ ನಾಯಕ, ಒಬ್ಬ ಉತ್ತಮ ಉಪನ್ಯಾಸಕ ನಿಜಕ್ಕೂ ವಿದ್ಯಾರ್ಥಿಗಳ ಪಾಲಿಗೆ ರೋಲ್ ಮಾಡೆಲ್ ಆಗಿ ಬಿಡುತ್ತಾನೆ. ಆದರೆ ಇಲ್ಲೊಬ್ಬ ಉಪನ್ಯಾಸಕ ನೆಟ್ಟಗೆ ಪಾಠ ಮಾಡದೆ ತನ್ನ ಕುಚೇಷ್ಠೆ, ಕಾಮಕೇಳಿ ಆಟಕ್ಕೆ ಬಿದ್ದು ಈಗ ವಿದ್ಯಾರ್ಥಿಗಳ ಪಾಲಿಗೆ ವಿಲನ್ ಆಗಿ ಬಿಟ್ಟಿದ್ದಾನೆ.
ವಿದ್ಯಾರ್ಥಿನಿಯರೊಂದಿಗೆ ಉಪನ್ಯಾಸಕ ಅಸಭ್ಯವಾಗಿ ವರ್ತಿಸುತ್ತಿದ್ದನ್ನು ಗಮನಿಸಿ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ಉಪನ್ಯಾಸಕನ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ದಾರೆ.

ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕನ ವಿರುದ್ಧ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದು, ಕಾಲೇಜಿನ ವತಿಯಿಂದ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ವಿಚಾರಕ್ಕೆ ಪ್ರತಿಭಟನೆ ಮಾಡಿದರು.
ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ರಂಗನಾಥ್ ವಿದ್ಯಾರ್ಥಿನಿಯೊಂದಿಗೆ ಮೊಬೈಲ್ ಚಾಟಿಂಗ್ ಹಾಗೂ ಕಾರಿನಲ್ಲಿ ಸುತ್ತಾಟ ನಡೆಸಿದ್ದು ಫೋಟೋ ವೀಡಿಯೋಗಳು ವೈರಲ್ ಆಗಿವೆ. ಅಲ್ಲದೆ ಕಾಲೇಜಿನ ಇತರ ವಿದ್ಯಾರ್ಥಿನಿಯರಿಗೂ ಕೂಡ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಬಗ್ಗೆ ಮೌಖಿಕವಾಗಿ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಆದರೂ ಸಹ ಕಾಲೇಜಿನ ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾದರು.

ಇಂದು ಕಾಲೇಜಿಗೆ ಬಂದಿದ್ದ ಉಪನ್ಯಾಸಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಸುಮಾರು 1500 ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ, ತಿಪಟೂರು ಪೊಲೀಸರು ಕಾಲೇಜಿಗೆ ದೌಡಿಸಿ ವಿದ್ಯಾರ್ಥಿಗಳ ಮನವೊಲಿಕೆ ಮುಂದಾದರು. ಅಲ್ಲದೆ ವಿದ್ಯಾರ್ಥಿಗಳ ಮುಂದೆಯೇ ಉಪನ್ಯಾಸಕನನ್ನು ಅರೆಸ್ಟ್ ಮಾಡಲಾಯಿತು.
ನಮ್ಮ ಮುಂದೆಯೇ ಉಪನ್ಯಾಸಕನ್ನ ಅರೆಸ್ಟ್ ಮಾಡಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ನಗರ ಠಾಣೆಯ ಪೊಲೀಸರನ್ನು ಕರೆಸಿ ಉಪನ್ಯಾಸಕನನ್ನು ಪೊಲೀಸರೊಂದಿಗೆ ಕಳಿಸಲಾಯಿತು.
ಈ ಗಲಾಟೆಯ ಹಿನ್ನೆಲೆಯಲ್ಲಿ ಉಪನ್ಯಾಸಕ ರಂಗನಾಥ್ ಗೆ ಕಾಲೇಜಿನ ಸಮಯದಲ್ಲಿ ಅನ್ಯ ವ್ಯಕ್ತಿಗಳು ಬಂದು ಉಪನ್ಯಾಸಕನೊಂದಿಗೆ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡು ತದನಂತರ ಉಪನ್ಯಾಸಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋಗಿದ್ದರು. ಇದನ್ನು ತಿಳಿದ ಸಮಾಜದ ಪ್ರಮುಖರು ನ್ಯಾಯ ತೀರ್ಮಾನ ಮಾಡಿದ್ದರು.

ಕಾಲೇಜಿನಲ್ಲಿ ಸುಮಾರು 3,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು 48 ಜನ ಖಾಯಂ ಉಪನ್ಯಾಸಕರು 78 ಜನ ಅರೆಕಾಲಿಕ ಉಪನ್ಯಾಸಕರು 21 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದು, ಇಲ್ಲಿನ ಬಹುತೇಕ ಉಪನ್ಯಾಸಕರಿಗೆ ಹೊಂದಾಣಿಕೆ ಇಲ್ಲದೆ ಇರುವುದು ಸಹ ಕಂಡು ಬಂದಿದೆ.
ಗಲಾಟೆಯ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಜರಿದ್ದು ನೊಂದ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿ ಕೊಡಲು ಹೋರಾಟ ಮಾಡಲಾಯಿತು. ಗಲಾಟೆಯು ತೀವ್ರ ಸ್ವರೂಪ ಪಡೆದುಕೊಳ್ಳುವುದನ್ನು ತಪ್ಪಿಸಲು ನಗರ ವೃತ ನಿರೀಕ್ಷಕ ಸಿದ್ದರಾಮೇಶ್ವರ ನೇತೃತ್ವದಲ್ಲಿ ಉಪನ್ಯಾಸಕ ರಂಗನಾಥನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.
ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಕುಮಾರಸ್ವಾಮಿ ಮಾತನಾಡಿ, ಈ ಘಟನೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ವಿವರಣೆ ಕೊಟ್ಟು ತದನಂತರ ಅವರ ಆದೇಶದಂತೆ ನಾನು ಪಾಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಉಪನ್ಯಾಸಕ ಮಾಡುವ ಕೆಲಸ ಮಾಡದೆ ಮಾಡಬಾರದ ಕೆಲಸ ಮಾಡಿ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿ ಈ ಪೊಲೀಸರ ಅಥಿತಿಯಾಗುವಂತಾಗಿದೆ. ಇಂತಹ ಉಪನ್ಯಾಸಕರು ವಿದ್ಯಾರ್ಥಿನಿಯರ ಪಾಲಿಗೆ ನಿಜಕ್ಕೂ ಕಂಟಕ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

Get real time updates directly on you device, subscribe now.

Comments are closed.

error: Content is protected !!