ಕುಣಿಗಲ್: ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದು ನಾಲ್ಕು ಮೇಕೆಗಳನ್ನು ತಡರಾತ್ರಿ ಕಳ್ಳರು ಕಳವು ಮಾಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಪ್ಪನಾಯಕನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ತಿಪ್ಪನಾಯಕನ ಹಳ್ಳಿಯ ಬೋರೇಗೌಡ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ನಾಲ್ಕು ಮೇಕೆ ಕಟ್ಟಲಾಗಿದ್ದು ಇತರೆ ಮೇಕೆಗಳನ್ನು ಬೇರೊಂದು ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ನಾಲ್ಕು ಮೇಕೆ ಕಳುವು ಮಾಡಲಾಗಿದ್ದು ಇವುಗಳ ಎಳೆ ಮರಿಗಳು ಜೋರಾಗಿ ಕೂಗಿಕೊಂಡಾಗ ಮನೆಯವರು ಎಚ್ಚರಗೊಂಡು ನೋಡಿದಾಗ ಮೇಕೆ ಕಟ್ಟಿದ್ದ ಹಗ್ಗ ಕತ್ತರಿಸಿ ಕಳವು ಮಾಡಿರುವುದು ಗೊತ್ತಾಗಿದೆ.
ನಾಲ್ಕು ಮೇಕೆಗಳು ಮರಿ ಹಾಕಿದ್ದು ಮರಿಗಳಿಗೆ ತಾಯಿ ಹಾಲು ಸಿಗದೆ ಅವುಗಳ ಚೀರಾಟ ಅಕ್ಕಪಕ್ಕದ ಮನೆಯವರನ್ನು ಎಚ್ಚರಿಸಿತು. ಒಟ್ಟಾರೆ ಅರವತ್ತು ಸಾವಿರ ಮೌಲ್ಯ ಎಂದು ಅಂದಾಜಿಸಲಾಗಿದ್ದು ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇದೆ ಭಾಗದಲ್ಲಿ ಹಸುವನ್ನು ಕಳವು ಮಾಡಿದ್ದರು. ಮಂಗಳವಾರ ಕರುವಿನ ಮೇಲೆ ಚಿರತೆ ದಾಳಿ ಮಾಡಿತ್ತು, ಒಂದೆಡೆ ಜಾನುವಾರು ಕಳ್ಳರು ಮತ್ತೊಂದೆಡೆ ಚಿರತೆ ಕಾಟ ಜಾನುವಾರು ಸಾಕುವುದೇ ಬೇಡವಾಗಿದೆ ಎಂದು ರೈತ ಬೋರೆಗೌಡ ಅಳಲು ತೋಡಿಕೊಂಡಿದ್ದಾರೆ.
Comments are closed.