ಚಾಲಕನ ವಿರುದ್ಧ ಮಹಿಳೆಯರ ಆಕ್ರೋಶ- ಮಾರುವೇಷ ಧರಿಸಿ ಪೀಲ್ಡ್ ಗಿಳಿದ ತಹಶೀಲ್ದಾರ್

ಮಹಿಳೆಯರ ಮೇಲೆ ಬಸ್ ಹತ್ತಿಸಲು ಯತ್ನ

1,155

Get real time updates directly on you device, subscribe now.


ಕೊರಟಗೆರೆ: ಗೊರವನಹಳ್ಳಿ ಮಹಾಲಕ್ಷ್ಮೀ ದರ್ಶನಕ್ಕೆ ಹತ್ತಾರು ಕಡೆಗಳಿಂದ ಮಹಿಳೆಯರು ಆಗಮನ, ರಾಜ್ಯ ಹೆದ್ದಾರಿಯಲ್ಲಿ ದಿನಪೂರ್ತಿ ಬಸ್ ಗಾಗಿ ಕಾದ್ರು ಬಸ್ಸು ಸೀಗದೆ ಮಹಿಳೆಯರ ಪರದಾಟ. ಬಸ್ಸಿನಲ್ಲಿ ಜಾಗವಿಲ್ಲದೇ ನಿಲ್ಲಿಸಲು ಒಪ್ಪದ ಬಸ್ ಚಾಲಕ, ಬಸ್ ನಿಲ್ಲಿಸದ ಪರಿಣಾಮ ತಡೆಯಲು ಪ್ರಯತ್ನಿಸಿದ ಮಹಿಳೆಯರು. ಮಹಿಳೆಯರ ಮೇಲೆಯೆ ಬಸ್ ಹತ್ತಿಸಲು ಪ್ರಯತ್ನಿಸಿದ ಚಾಲಕನ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆದಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂಯ ಜಿ.ನಾಗೇನಹಳ್ಳಿ ಬಳಿಯ ಪಾವಗಡ- ದಾಬಸ್ಪೇಟೆಯ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹತ್ತಾರು ಜಿಲ್ಲೆಗಳಿಂದ ಶುಕ್ರವಾರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಆಗಮಿಸಿದ್ದಾರೆ. ಗೊರವನಹಳ್ಳಿ ಪ್ರವಾಸಿ ಕ್ಷೇತ್ರದಿಂದ ಮತ್ತೆ ತೆರಳಲು ಸಮರ್ಪಕ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲದೇ ಮಹಿಳೆಯರಿಗೆ ಸಂಕಷ್ಟ ಎದುರಾಗಿದೆ.

ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಸಮರ್ಪಕ ಸರಕಾರಿ ಬಸ್ ಸೌಲಭ್ಯವಿಲ್ಲ. ಕೊರಟಗೆರೆ ಮತ್ತು ಜಿ.ನಾಗೇನಹಳ್ಳಿ ಮಾರ್ಗವಾಗಿ ಬಂದು ಆಟೋ ಅಥವಾ ಖಾಸಗಿ ವಾಹನಗಳ ಮೂಲಕ ದೇವಾಲಯಕ್ಕೆ ತೆರಳಬೇಕಿದೆ. ಖಾಸಗಿ ವಾಹನ ಸೀಗದಿದ್ದರೆ ಪ್ರವಾಸಿಗರು ಮತ್ತು ಮಹಿಳೆಯರಿಗೆ ಇನ್ನಷ್ಟು ಸಮಸ್ಯೆ ಸೃಷ್ಟಿ ಆಗಲಿದೆ. ರಾಜ್ಯ ಸರಕಾರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ತೆರಳಲು ಸಮರ್ಪಕ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ.

3 ಗಂಟೆ ಕಾದ್ರು ನಿಲ್ಲಿಸದ ಸರಕಾರಿ ಬಸ್
ಮಹಾಲಕ್ಷ್ಮೀದೇವಿಯ ದರ್ಶನ ಮುಗಿಸಿಕೊಂಡು ಗೊರವನಹಳ್ಳಿಯಿಂದ ಜಿ.ನಾಗೇನಹಳ್ಳಿಗೆ ಆಟೋ ಮೂಲಕ ಮಹಿಳೆಯರು ಆಗಮಿಸಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ 3 ಗಂಟೆಯಾದ್ರು ಚಾಲಕ ಸರಕಾರ ಬಸ್ ನಿಲ್ಲಿಸದೆ ಹಾಗೇ ಹೊರಟು ಹೋಗಿದ್ದಾರೆ. ರೊಚ್ಚಿಗೆದ್ದ ಮಹಿಳೆಯರು ಬಸ್ಸಿಗೆ ಅಡ್ಡ ನಿಂತುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕ ಬಸ್ ನಿಲ್ಲಿಸದೆ ಮಹಿಳೆಯರ ಮೇಲೆ ಹತ್ತಿಸಲು ಪ್ರಯತ್ನ ಪಟ್ಟಿರುವ ಘಟನೆ ಜಿ.ನಾಗೇನಹಳ್ಳಿ ಬಳಿ ಶುಕ್ರವಾರ ನಡೆದಿದೆ.

ಸಾರಿಗೆ ಇಲಾಖೆ ಜೊತೆ ತಹಶೀಲ್ದಾರ್ ಸಭೆ
ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಶುಕ್ರವಾರ ವಿಶೇಷ ಸಭೆ ನಡೆಸಿದ್ದಾರೆ. ಶಕ್ತಿ ಯೋಜನೆಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗ್ರಾಮೀಣ ಪ್ರದೇಶ, ಪ್ರವಾಸಿ ಕ್ಷೇತ್ರ, ಬಸ್ ನಿಲ್ದಾಣ ಮತ್ತು ರಾಜ್ಯ ಹೆದ್ದಾರಿಯ ಕಡೆಯಲ್ಲಿ ವಿಶೇಷ ಗಮನ ಹರಿಸಿ ಬಸ್ಸುಗಳ ಕೊರತೆ ಆಗದಂತೆ ಕ್ರಮಕ್ಕೆ ಆದೇಶ ಮಾಡಿರುವ ಘಟನೆ ನಡೆದಿದೆ.

ಮಾರುವೇಷ ಹಾಕಿದ ಕೊರಟಗೆರೆ ತಹಶೀಲ್ದಾರ್
ಪ್ರಯಾಣಿಕರ ಮನವಿಗೆ ತಕ್ಷಣ ಸ್ಪಂದಿಸಿದ ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಸ್ಥಳಕ್ಕೆ ಧಾವಿಸಿದ್ದಾರೆ. ಜಿ.ನಾಗೇನಹಳ್ಳಿ ಬಸ್ ನಿಲ್ದಾಣದಿಂದ ತಮ್ಮ ಸರಕಾರಿ ವಾಹನ ಮುಂದಕ್ಕೆ ನಿಲ್ಲಿಸಿ ಪ್ರಯಾಣಿಕರ ವೇಷದಲ್ಲಿ ಸರಕಾರಿ ಬಸ್ ನಿಲ್ಲಿಸಲು ಪ್ರಯತ್ನಿಸಿದ್ದಾರೆ. 4 ಸರಕಾರಿ ಬಸ್ ಗಳು ನಿಲ್ಲಿಸದೆ ಹಾಗೇ ಹೊರಟು ಹೋಗಿವೆ. ಸ್ವಲ್ಪ ಮುಂದೆ ತಹಶೀಲ್ದಾರ್ ವಾಹನ ಕಂಡು ಮತ್ತೇ ನಿಲ್ಲಿಸಿದ್ದಾರೆ. ಸರಕಾರಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಸ್ಥಳದಲ್ಲಿಯೇ ಚಳಿಜ್ವರ ಬೀಡಿಸಿ ಖಡಕ್ಎಚ್ಚರಿಕೆ ನೀಡಿದ್ದಾರೆ.

BOX:
ಗೊರವನಹಳ್ಳಿ ಮಹಾಲಕ್ಷ್ಮೀ ದರ್ಶನಕ್ಕೆ ಆಗಮಿಸಿದ್ದೇ ನಮ್ಮ ತಪ್ಪಾಗಿದೆ. 4 ಗಂಟೆ ಕಾದ್ರು ರಾಜ್ಯ ಹೆದ್ದಾರಿಯಲ್ಲಿ ಸರಕಾರಿ ಬಸ್ ನಿಲ್ಲಿಸಲೇ ಇಲ್ಲ. ಗಂಡಸರಿಗೆ ತಬ್ಬಿಕೊಂಡೇ ಬಸ್ ಹತ್ತುವಂತೆ ಚಾಲಕ ಸೂಚನೆ ನೀಡ್ತಾರೆ. ಪುಟಾಣಿ ಮಕ್ಕಳ ಜೊತೆ ನಾವು ಸಂಚಾರ ಮಾಡೋದು ಹೇಗೆ, ಸರಕಾರಿ ಬಸ್ ಅಡ್ಡ ಹಾಕಲು ನಾವು ಯತ್ನಿಸಿದ್ರೆ ನಮ್ಮ ಮೇಲೆ ಹತ್ತಿಸಲು ಬರ್ತಾರೆ.
-ಕಾಳಮ್ಮ, ನೊಂದ ಮಹಿಳೆ.

4 ಗಂಟೆಯಿಂದ 7 ಗಂಟೆವರೆಗೆ ಬಸ್ ನಿಲ್ಲಿಸದೆ ಸಮಸ್ಯೆ ಆಗಿತ್ತು. ನಾನೇ ಖುದ್ದಾ ಬಸ್ ನಿಲ್ಲಿಸಿದ್ರು ಚಾಲಕ ನಿಲ್ಲಿಸಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿದ್ದೇನೆ, ರಾಜ್ಯ ಹೆದ್ದಾರಿಯ ಜಿ.ನಾಗೇನಹಳ್ಳಿ ಬಳಿ ಟಿಸಿ ಪಾಯಿಂಟ್ ಹಾಕಲಾಗಿದೆ. ಮಹಿಳೆಯರ ಮೇಲೆ ಬಸ್ ಹತ್ತಿಸಲು ಪ್ರಯತ್ನಪಟ್ಟ ಚಾಲಕನ ಪತ್ತೆಗೆ ಸೂಚನೆ ನೀಡಲಾಗಿದೆ.
-ಮುನಿಸ್ವಾಮಿ ರೆಡ್ಡಿ, ತಹಶೀಲ್ದಾರ್, ಕೊರಟಗೆರೆ.

ತಹಶೀಲ್ದಾರ್ ಮತ್ತು ಸಾರಿಗೆ ಇಲಾಖೆಯಿಂದ ಈಗಾಗಲೇ ಸ್ಥಳ ಪರಿಶೀಲನೆ ನಡೆದಿದೆ. ಪ್ರವಾಸಿ ಕ್ಷೇತ್ರಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಪರಿಣಾಮ ಸಮಸ್ಯೆ ಸೃಷ್ಟಿಯಾಗಿದೆ. ಸರಕಾರಿ ಬಸ್ಸಿನಲ್ಲಿ 80 ಜನ ಇದ್ದ ಪರಿಣಾಮ ಚಾಲಕ ಬಸ್ ನಿಲ್ಲಿಸಿಲ್ಲ ಅಷ್ಟೆ, ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ತುಮಕೂರು ಜಿಲ್ಲೆಯ ಎಲ್ಲಾ ಡಿಪೋ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
-ಗಜೇಂದ್ರಕುಮಾರ್, ವಿಭಾಗೀಯ ನಿಯಂತ್ರಣಾಅಧಿಕಾರಿ, ಸಾರಿಗೆ ಇಲಾಖೆ, ತುಮಕೂರು.

Get real time updates directly on you device, subscribe now.

Comments are closed.

error: Content is protected !!