ತುಮಕೂರು: ನಿರಂತರಯೋಗ, ಧ್ಯಾನಭ್ಯಾಸದಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ತುಮಕೂರು ಜಿಲ್ಲಾ ಆರೋಗ್ಯ ಭಾರತಿ ಅಧ್ಯಕ್ಷ ಡಾ.ಚಿನ್ಮಯ್ ಕುಲ್ಕರ್ಣಿ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ಎನ್ಎಸ್ಎಸ್ ಘಟಕವು ಆರೋಗ್ಯ ಭಾರತಿ ಸಹಯೋಗದಲ್ಲಿ ಆಯೋಜಿಸಿದ್ದ ಒತ್ತಡ ಹಾಗೂ ಆರೋಗ್ಯ ನಿರ್ವಹಣೆಯಲ್ಲಿ ಯೋಗದ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿದ್ದರೆ ಸಾಲದು, ಸಾಮಾಜಿಕವಾಗಿಯೂ ಸದೃಢರಾಗಿರಬೇಕು. ಮುಖ್ಯವಾಗಿ ನಮ್ಮ ಸುತ್ತಲೂ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಯೋಗ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಠ್ ಮಾತನಾಡಿ, ಒತ್ತಡ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಯೋಗದ ಪಾತ್ರ ತುಂಬಾ ಮುಖ್ಯವಾಗಿದೆ. ಯೋಗ ಭಾರತೀಯ ಮೂಲದ ಆರೋಗ್ಯದ ಒಂದು ಸೂತ್ರ, ಮನುಷ್ಯ ಆರೋಗ್ಯವಾಗಿ ಇರಬೇಕೆಂದರೆ ಪ್ರತಿನಿತ್ಯಯೋಗಾಭ್ಯಾಸ ಮಾಡಬೇಕೆಂದು ಹೇಳಿದರು.
ಅಶ್ವಿನಿ ಆಯುರ್ವೇದ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ವಾತಿ ಬಿ.ಆರ್. ಒತ್ತಡ ಹಾಗೂ ಆರೋಗ್ಯ ನಿರ್ವಹಣೆಯಲ್ಲಿಯೋಗದ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿಯುವ ರೆಡ್ ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ.ಪೂರ್ಣಿಮಾ.ಡಿ, ತುಮಕೂರು ಆರೋಗ್ಯ ಭಾರತಿ ವಿಭಾಗದ ಸಂಯೋಜಕ ವೈದ್ಯಅರವಿಂದ್, ವಿವಿ ವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಘಟಕದ ಸಂಯೋಜಕ ಡಾ. ಚಿಕ್ಕಪ್ಪ ಉಡುಗಣಿ ಭಾಗವಹಿಸಿದ್ದರು.
Comments are closed.