ಬೇಡಿಕೆ ಈಡೇರಿಸಲು ಆಗ್ರಹಿಸಿ ಆಶಾಗಳ ಹೋರಾಟ

143

Get real time updates directly on you device, subscribe now.


ಕುಣಿಗಲ್: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಾಲೂಕು ಸಮಿತಿ ವತಿಯಿಂದ ಎಐಯುಟಿಯುಸಿ ಸಂಯುಕ್ತಾಶ್ರಯದಲ್ಲಿ ತಾಲೂಕು ಅರೋಗ್ಯಾಧಿಕಾರಿಗಳ ಕಛೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪಟ್ಟಣದ ಆರೋಗ್ಯಾಧಿಕಾರಿಗಳ ಕಚೇರಿ ಮುಂದೆ ಜಮಾವಣೆಗೊಂಡ ಕಾರ್ಯಕರ್ತೆಯರು ಸರ್ಕಾರದ ಅವೈಜ್ಞಾನಿಕ ಕ್ರಮದ ಬಗ್ಗೆ ಖಂಡನೆ ವ್ಯಕ್ತಪಡಿಸಿ ಘೋಷಣೆ ಕೂಗಿದರು. ಈ ವೇಳೆ ತಾಲೂಕು ಅಧ್ಯಕ್ಷೆ ಶಶಿಕಲಾ ಮಾತನಾಡಿ, ಕಳೆದ ಕೆಲವಾರ ದಿನಗಳಿಂದ ಕಾರ್ಯಕರ್ತೆಯರಿಗೆ ಮೊಬೈಲ್ ನಲ್ಲಿ ಆರೋಗ್ಯ, ಪೌಷ್ಟಿಕ ಸಮೀಕ್ಷೆ ಮಾಡಲು ಬಲವಂತವಾಗಿ ಒತ್ತಾಯ ಮಾಡಲಾಗುತ್ತಿದೆ. ಆದರೆ ತಾಲೂಕಿನಲ್ಲಿ ಬಹುತೇಕ ಕಾರ್ಯಕರ್ತರ ಬಳಿ ಸ್ಮಾರ್ಟ್ ಫೋನ್ ಇಲ್ಲ. ಇನ್ನು ಕೆಲವರ ಬಳಿ ಫೋನ್ ಇದ್ದರೂ ಇಲಾಖೆಯ ತತ್ರಾಂಶಗಳಿಗೆ ಸ್ಪಂದಿಸುತ್ತಿಲ್ಲ. ಇನ್ನು ಕೆಲವರಿಗೆ ನಿಗದಿತ ನೆಟ್ ವರ್ಕ್ ಸಿಗುತ್ತಿಲ್ಲ. ಆಂಗ್ಲ ಭಾಷೆಯಲ್ಲಿ ನಮೂದು ಮಾಡಬೇಕಿದ್ದು ಕೆಲವರಿಗೆ ಬರುತ್ತಿಲ್ಲ. ಸಮೀಕ್ಷೆ ವೇಳೆಯಲ್ಲಿ ಜನರು ವಿರೋಧ ವ್ಯಕ್ತಪಡಿಸುತ್ತಿರುವುದು ಬಹಳ ತೊಂದರೆಯಾಗುತ್ತಿದೆ.

ಆದ್ದರಿಂದ ಸಮೀಕ್ಷೆ ಕಾರ್ಯವನ್ನು ಆಶಾ ಕಾರ್ಯಕರ್ತೆಯರೊಂದಿಗೆ ಇತರೆ ಇಲಾಖೆಯವರು ಸೇರಿ ಮಾಡುವಂತೆ, ಸರ್ವೇ ಮಾಡಲು ಕಾರ್ಯಕರ್ತೆಯರಿಗೆ ಸೂಕ್ತ ಮೊಬೈಲ್ ಹಾಗೂ ನೆಟ್ ಪ್ಯಾಕ್ ವ್ಯವಸ್ಥೆ ಮಾಡುವಂತೆ, ಮೊಬೈಲ್ ಬಳಕೆ ಮಾಡಲು ಬಾರದ ಕಾರ್ಯಕರ್ತರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ, ಬೇಕಾದ ಸೌಲಭ್ಯ ಹಾಗೂ ಸೂಕ್ತ ಸಂಭಾವನೆ ನೀಡುವ ಜೊತೆಯಲ್ಲಿ ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕಿ ಮಂಜುಳಾ, ತಾಲೂಕು ಕಾರ್ಯದರ್ಶಿವಿನೋದ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!