ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗಾಗಿ ಗುಬ್ಬಿ ತಾಲ್ಲೂಕಿನ ಹೇಮಾವತಿ ನಾಲೆ ಹಾಗೂ ತುಮಕೂರು ತಾಲ್ಲೂಕಿನ ಬುಗುಡನಹಳ್ಳಿ ಕೆರೆ ಶುದ್ದೀಕರಣ ವ್ಯವಸ್ಥೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಬ್ಬಿ ತಾಲೂಕಿನ ಈಡಕನಹಳ್ಳಿ ಗ್ರಾಮದ ಬಳಿಯ ಹೇಮಾವತಿ ನಾಲೆಯ ಕಾಮಗಾರಿ ವೀಕ್ಷಿಸಿ ಪರಿಶೀಲನೆ ನಡೆಸಿದರು. ಹೇಮಾವತಿ ಕಾರ್ಯ ನಿರ್ವಾಹಕ ಅಭಿಯಂತರಾದ ವರದಯ್ಯಗೆ ಕುಡಿಯುವ ನೀರು ಸರಬರಾಜು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
ಹೇಮಾವತಿ ಅಣೆಕಟ್ಟಿನಿಂದ ಜಿಲ್ಲೆಯ ಶಾಖಾ ಕಾಲುವೆ ಮುಖಾಂತರ ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ 1.135 ಟಿಎಂಸಿ ಕುಡಿಯುವ ನೀರು ಹಂಚಿಕೆಯಾಗಿದ್ದು, ತುಮಕೂರು ಶಾಖಾ ನಾಲೆಯ ಸರಪಳಿ 123.475 ಕಿ.ಮೀ. ನಲ್ಲಿರುವ ಎಸ್ಕೇಪ್ ಹಳ್ಳದ ಮುಖಾಂತರ ತುಮಕೂರು ತಾಲ್ಲೂಕಿನ ಬುಗುಡನಹಳ್ಳಿ ಕೆರೆಗೆ ನೀರು ಹರಿಸಲಾಗುತ್ತದೆ. ಬುಗುಡನಹಳ್ಳಿ ಕೆರೆಯ ಪೂರ್ಣ ನೀರಿನ ಸಾಮರ್ಥ್ಯ 363.00 ಎಂಸಿಎಫ್ ಟಿ ಹಾಗೂ ಗರಿಷ್ಟ ನೀರಿನ ಮಟ್ಟ 793.60 ಮೀ. ಗಳಾಗಿದ್ದು, ಜನವರಿ 2023ರಲ್ಲಿ ತುಂಬಿಸಲಾಗಿದೆ.
ನಂತರ ಸಚಿವರು ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆ ಹಾಗೂ ಕುಡಿಯುವ ನೀರು ಶುದ್ಧೀಕರಣ ವ್ಯವಸ್ಥೆ ವೀಕ್ಷಿಸಿದರು.
Comments are closed.