ಹೆಂಡತಿ ಸಾಯಿಸಿದ ಗಂಡನಿಗೆ ಜೀವಾವಧಿ ಶಿಕ್ಷೆ

1,590

Get real time updates directly on you device, subscribe now.


ಕೊರಟಗೆರೆ: ದಿನಸಿ ಸಾಮಾನಿನ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿ ತನ್ನ ಹೆಂಡತಿಯ ಮೇಲೆ ಡಿಸೇಲ್ ಸುರಿದು ಆಕೆಯ ಸಾವಿಗೆ ಕಾರಣನಾದ ಗಂಡನಿಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಾದವ ಕರಕೇರ ಅವರು ಜೀವಾವಧಿ ಶಿಕ್ಷೆಯ ಜೊತೆ 1ಲಕ್ಷ ದಂಢ ವಿಧಿಸಿ ತೀರ್ಪು ನೀಡಿದ್ದಾರೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಪಂನ ಸೋಂಪುರ ಗ್ರಾಮದ ಶಫೀವುಲ್ಲಾ ಮಗ ಜಿಯಾವುಲ್ಲಾ (42) ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ, ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಜೊತೆ 1 ಲಕ್ಷ ದಂಡ ವಿಧಿಸಿ ಜೂ.19 ರಂದು ಆದೇಶ ಮಾಡಿದೆ, ಅಭಿಯೋಜನೆಯ ಪರವಾಗಿ ಸರಕಾರಿ ಅಭಿಯೋಜಕ ನಿರಂಜನಮೂರ್ತಿ.ಬಿ.ಎಂ ವಾದ ಮಂಡಿಸಿದ್ದಾರೆ.
ದಿನಸಿ ಸಾಮಾನಿನ ವಿಚಾರಕ್ಕೆ ಜಗಳ..
ಸೋಂಪುರದ ಜಿಯಾವುಳ್ಳಾ ಮತ್ತು ತಸ್ಲೀಮಾಭಾನು ನಡುವೆ ದಿನಸಿ ಸಾಮಾನಿನ ವಿಚಾರಕ್ಕೆ 2019ರ ಮೇ 1 4ರಂದು ಜಗಳವಾಗಿ ಬಾಟಲ್ನಲ್ಲಿದ್ದ ಡಿಸೇಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗುತ್ತಾನೆ, ಸುಟ್ಟ ಗಾಯಗಳಾಗಿದ್ದ ತಸ್ಲೀಮಾ ಭಾನು ಅವರನ್ನು ಹೊಳವನಹಳ್ಳಿ, ಕೊರಟಗೆರೆ ಮತ್ತು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುತ್ತಾರೆ, 2019ರ ಮೇ 20 ರಂದು ಚಿಕಿತ್ಸೆ ಫಲಕಾರಿ ಆಗದೆ ತಸ್ಲೀಮಾಭಾನು ಆಸ್ಪತ್ರೆಯಲ್ಲಿ ಮೃತಪಡುತ್ತಾಳೆ.
ಕೊರಟಗೆರೆ ಸಿಪಿಐ ನದಾಫ್ ತನಿಖೆ..
2019ರ ಮೇ 14ರಂದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂದಿನ ಸಿಪಿಐ ಎಫ್.ಕೆ.ನದಾಫ್ ಐಪಿಸಿ ದಂಡ ಸಂಹಿತೆ 302ರ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕೆ ದೋಷಾರೋಷಣಾ ಪಟ್ಟಿ ಸಲ್ಲಿಸಿದ್ದರು.
ಮೃತಳು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದ್ದಾಗ ಯಲಹಂಕ ತಹಶೀಲ್ದಾರ್ ಮುಂದೆ ನೀಡಿದ ಮರಣ ಪೂರ್ವ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿ ಜಿಯಾವುಳ್ಳ ಸಿದ್ದದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದೆ.

Get real time updates directly on you device, subscribe now.

Comments are closed.

error: Content is protected !!