ಅಂಗಡಿ ಬೀಗ ಮುರಿದು ಕಳ್ಳತನ

308

Get real time updates directly on you device, subscribe now.


ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯ ಕೆರೆ ಕೋಡಿ ಬಳಿ ಅಂಗಡಿಯ ಬೀಗ ಮುರಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಕೇಬಲ್ ಹಾಗೂ ಪರಿಕರ ಹೊತ್ತೊಯ್ದು ಪರಾರಿಯಾಗಿದ್ದಾರೆ.
ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150 ಎ ಗೆ ಹೊಂದಿಕೊಂಡಂತಿರುವ ಎಲೆಕ್ಟ್ರಿಕ್ ಮತ್ತು ಹಾರ್ಡ್ ವೇರ್ ಅಂಗಡಿಗೆ ಕೆಲ ತಿಂಗಳ ಹಿಂದೆಯಷ್ಟೇ ಕಳ್ಳರು ನುಗ್ಗಿದ್ದರು. ಇದೀಗ ಮತ್ತೆ ಇದೆ ಅಂಗಡಿಯನ್ನು ಕಳ್ಳರು ಟಾರ್ಗೆಟ್ ಮಾಡುವ ಮೂಲಕ ಅಂಗಡಿ ಮಾಲೀಕರನ್ನು ಬೆಚ್ಚಿ ಬೀಳಿಸಿದ್ದಾರೆ.
ಎಂದಿನಂತೆ ಅಂಗಡಿ ಮಾಲೀಕರು ಬೆಳಗ್ಗೆ ಅಂಗಡಿ ತೆರೆಯಲು ಬಂದ ವೇಳೆ ಅಂಗಡಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಅಂಗಡಿಯ ಮುಂದಿನ ಕಂಬದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾವನ್ನು ಸಹ ಕಳ್ಳರು ಹೊಡೆದು ಹಾಕುವ ಮೂಲಕ ಕಳ್ಳರು ಕೈಚಳಕ ಪ್ರದರ್ಶಿಸಿದ್ದಾರೆ.
ಘಟನೆಯ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಳ್ಳತನ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!