ರಂಗನಗುಡ್ಡದಲ್ಲಿ ಹಗಲಲ್ಲೇ ಚಿರತೆ ಪ್ರತ್ಯಕ್ಷ

179

Get real time updates directly on you device, subscribe now.


ಹುಳಿಯಾರು: ಹುಳಿಯಾರು ಹೋಬಳಿಯ ರಂಗನಕೆರೆ ರಂಗನಗುಡ್ಡದಲ್ಲಿ ಚಿರತೆಗಳು ಓಡಾಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದು ಈ ಭಾಗದ ಜನರನ್ನು ಭಯ ಭೀತಿಗೊಳಿಸಿದ್ದು ಓಡಾಡಲು ಹೆದರುವಂತಾಗಿದೆ.

ಕಳೆದ ಐದು ತಿಂಗಳ ಹಿಂದಷ್ಟೆ ರಂಗನಕೆರೆ ಗುಡ್ಡದ ಸಮೀಪದ ಗುರುವಾಪುರದ ಕೋಳಿ ಫಾರಂ ಮೇಲೆ ಚಿರತೆ ದಾಳಿ ಮಾಡಿತ್ತು. ಕಳೆದ ಐರು ತಿಂಗಳ ಹಿಂದೆ ಕಾರೇಹಳ್ಳಿ ತೋಟದ ಮನೆಯ ಕೋಳಿ ಫಾರಂ ಮೇಲೆ ದಾಳಿ ಮಾಡಿ ಅಪಾರ ನಷ್ಟ ಮಾಡಿತ್ತು. ಈ ಎರಡೂ ಘಟನೆಗಳು ಇನ್ನೂ ಹಸಿರಾಗಿರುವವಾಗಲೇ ಗುಡ್ಡದಲ್ಲಿ ಚಿರತೆ ಓಡಾಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

15 ವರ್ಷದ ಹಿಂದೆ ವಿದ್ಯುತ್ ಉತ್ಪಾದನೆಗೆ ಇಲ್ಲಿ ಗಾಳಿ ಯಂತ್ರಗಳನ್ನು ಅಳವಡಿಸಲಾಗಿದೆ. ಎತ್ತರದ ಗುಡ್ಡದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಗುಡ್ಡದ ತುತ್ತ ತುದಿಯಲ್ಲಿ ರಂಗನಾಥಸ್ವಾಮಿ ದೇಗುಲವಿದೆ. ಗುಡ್ಡದ ಕೆಳ ಭಾಗದಿಂದ ನೆತ್ತಿಯ ವರೆಗೆ 6 ಕಿ.ಮೀ ದೂರವಿದ್ದು ರಸ್ತೆ ಅಕ್ಕ ಪಕ್ಕ ಸುಂದರ ಪರಿಸರ ಹೊಂದಿದೆ. ಸುಂದರ ಪರಿಸರ ವೀಕ್ಷಣೆ ಹಾಗೂ ಪವನ ವಿದ್ಯುತ್ ಉತ್ಪಾದನೆಯ ಮಾಹಿತಿ ಪಡೆಯಲು ಗುಡ್ಡಕ್ಕೆ ಜನರು ಬರುತ್ತಾರೆ.
ಕುರಿಗಾಹಿಗಳು, ದನ ಕರುಗಳನ್ನು ಮೇಯಿಸಲು ಹೋಗುತ್ತಾರೆ, ಇತ್ತೀಚೆಗಷ್ಟೆ ಹುಳಿಯಾರು ಪದವಿ ಕಾಲೇಜಿನಿಂದ ಈ ಗುಡ್ಡಕ್ಕೆ ಚಾರಣ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಹಾಗಾಗಿ ಅರಣ್ಯ ಇಲಾಖೆ ನಿರ್ಭಯವಾಗಿ ಓಡಾಡುತ್ತಿರುವ ಚಿರತೆಗಳನ್ನು ಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಂಗನಗುಡ್ಡದಲ್ಲಿ ಚಿರತೆಗಳಿದ್ದು, ಮನುಷ್ಯರ ಮೇಲೆ ದಾಳಿ ಸೇರಿದಂತೆ ಯಾವುದೇ ಅಹಿತರ ಘಟನೆ ಎಂದೂ ನಡೆದಿಲ್ಲ. ಚಿರತೆ ಕಂಡು ಬಂದಿರುವ ಬಗ್ಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಅರಿವು ಮೂಡಿಸಲಾಗುವುದು. ಪವನ ವಿದ್ಯುತ್ ಕಂಪನಿ ಸಿಬ್ಬಂದಿ ಸಂಚಾರದ ವೇಳೆ ಚಿರತೆ ಕಾಣಿಸುವುದನ್ನು ವೀಡಿಯೊ ಮಾಡಿ ಹರಿಯ ಬಿಟ್ಟಿದ್ದಾರೆ ಬುಕ್ಕಾಪಟ್ಟಣ ಉಪವಲಯ ಅರಣ್ಯಾಧಿಕಾರಿ ಕಿರಣ್ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!